ಶಿವಮೊಗ್ಗ : ಶಿವಮೊಗ್ಗ ಬೆಳ್ಳಿಮಂಡಲ, ಯುಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ 5 ನೇ ಅಂಬೆಗಾಲು ಕಿರು ಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಅಂಬೆಗಾಲು ಕಿರು ಚಿತ್ರ ಸ್ಪರ್ಧೆಯಲ್ಲಿ ಗುರುತಿಸಿದ್ದ ಹಲವು ಚಿತ್ರಗಳು ರಾಜ್ಯಮಟ್ಟದಲ್ಲಿಯೂ ಗಮನ ಸೆಳದಿವೆ. ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ. ಇದೀಗ ೫ನೇ ಅಂಬೆಗಾಲು ಕಿರು ಚಿತ್ರ ಸ್ಪರ್ಧೆ ಆಯೋಜಿಸಿದ್ದು, ಕನ್ನಡ ಸಾಹಿತ್ಯ ಕೃತಿಯನ್ನು ಆಧರಿಸಿದ ಚಿತ್ರಗಳಿಗೆ ಹಾಗೂ ಹಾಸ್ಯ ಕಥಾವುಳ್ಳ ಚಿತ್ರಗಳಿಗೆ ವಿಶೇಷ ಆಧ್ಯತೆ ನೀಡಲಾಗುವುದು.
ಸ್ಫರ್ಧೆಯಲ್ಲಿ ಭಾಗವಹಿಸಲು ೫೦೦ ರೂ ಪ್ರವೇಶ ಶುಲ್ಕವಿದೆ. ಅರ್ಜಿಗಳು ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ದೊರೆಯಲಿದ್ದು ಜುಲೈ ೨೦ರ ಒಳಗಾಗಿ ಅರ್ಜಿಗಳನ್ನು ಭರ್ತಿ ಮಾಡಿ ಕೊಡಬೇಕು. ಬಳಿಕ ಸೆಪ್ಟಂಬರ್ ೨೦ರ ಒಳಗೆ ಕಿರುಚಿತ್ರದ ಹೆಚ್‌ಡಿ ಶ್ರೇಣಿಯ ನಾಲ್ಕು ಡಿವಿಡಿಗಳನ್ನು ನೀಡಬೇಕು ಎಂದು ಮಾಹಿತಿ ನೀಡಿದರು.