ಸಹಾಯಕವಾಗಲಿದೆ ವೆಬ್‌ಸೈಟ್ 

ಶಿವಮೊಗ್ಗ : ಅಗಮುಡಿ ಸಮಾಜದ ವಧು-ವರರ ಅನ್ವೇಷಣೆಗಾಗಿ ಅಗಮುಡಿ ಸಮಾಜ ಸೇವಾ ಸಂಘ ವೆಬ್‌ಸೈಟ್ ಒಂದನ್ನು ರೂಪಿಸಿದೆ. ಅದರ ಉದ್ಘಾಟನೆ ಕಾರ್ಯಕ್ರಮ ಜೂನ್ 12ಕ್ಕೆ ನಡೆಯಲಿದೆ.

ಮೊದಲಿಯಾರ್ ಅಗಮುಡಿ ಮ್ಯಾಟ್ರಿಮೋನಿ ಶಿವಮೊಗ್ಗ ಡಾಟ್ ಕಾಂ ಹೆಸರಿನ ವೆಬ್‌ಸೈಟ್ ಉದ್ಘಾಟನೆ ಶ್ರೀ ನೀಲಮೇಘಂ ಮೊದಲಿಯಾರ್ ಬಡಾವಣೆಯಲ್ಲಿನ ಆಗಮುಡಿ ಸಮುದಾಯ ಭವನದಲ್ಲಿ ನಡೆಯಲಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಾರ್ಯಕ್ರಮಕ್ಕೆ ಆಗಮಿಸಿಲಿದ್ದಾರೆ. ಈ ವೆಬ್‌ಸೈಟ್ ಮೂಲಕ ಭಾರತ ಮಾತ್ರವಲ್ಲದೆ ವಿದೇಶದಲ್ಲಿ ನೆಲಸಿರುವ ಸಮಾಜದ ಜನರಿಗೆ ವಧು ವರರ ಅನ್ವೇಷಣೆಗೆ ಬಹಳ ಸಹಾಯವಾಗಲಿದೆ ಎಂದು ಅಗಮುಡಿ ಸಮಾಜ ಸೇವಾ ಸಂಘ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದೆ.