ಹರ್ಷ ಕೊಲೆ ಪ್ರಕರಣ ಕುರಿತು ಎಡಿಜಿಪಿ ಮಾಹಿತಿ 

ಶಿವಮೊಗ್ಗ : ಹರ್ಷ ಹತ್ಯೆ ಹಾಗೂ ಆನಂತರ ನಡೆದ ಘಟನೆಗಳ ಕುರಿತಾಗಿ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿದ್ದಾರೆ.

ಅಮೀರ್ ಅಹಮದ್ ವೃತ್ತದ ಬಳಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗವನ್ನ ಹತೋಟಿಗೆ ತರಲು ರಾಜ್ಯದ ಇತರೆಡೆಯಿಂದ ಪೊಲೀಸ್ ಸಿಬ್ಬಂದಿಯನ್ನ ಕರೆಸಲಾಗಿದೆ. ಜೊತೆಗೆ ರ್‍ಯಾಪಿಡ್ ಆಕ್ಷನ್ ಫೋರ್ಸ್ ಕೂಡ ಶಿವಮೊಗ್ಗದಲ್ಲಿ ಮೊಕ್ಕಂ ಹೂಡಿದೆ. ಹತ್ಯೆ ನಂತರ ಕೆಲ ಘಟನೆಗಳು ನಡೆದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿತರನ್ನ ಗುರುತು ಹಿಡಿಯುವ ಕಾರ್ಯ ಕೂಡ ನಡೆಯುತ್ತಿದೆ. ಹತ್ಯೆಗೆ ನಿಖರ ಕಾರಣ ಏನೆಂದು ತನಿಖೆ ಪೂರ್ಣಗೊಂಡ ನಂತರ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.