ಯಡಿಯೂರಪ್ಪನವರ ರಾಜೀನಾಮೆ ಕೊಡಿಸಿದ್ದಲ್ಲ.. ಕೊಟ್ರು

ಹೈಲೆಟ್ಸ್:

ಯಡಿಯೂರಪ್ಪನವರ ರಾಜೀನಾಮೆ ಕೊಡಿಸಿದ್ದಲ್ಲ.. ಕೊಟ್ರು

ಸಿದ್ದರಾಮಯ್ಯರನ್ನು ರಾಜ್ಯದ ಜನರು ಓಡಿಸಿದ್ರು 

ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ 

ಶಿವಮೊಗ್ಗ:

ಯಡಿಯೂರಪ್ಪನವರು ರಾಜೀನಾಮೆಯನ್ನು ಅವರಾಗೆ ಅವರು ಕೊಟ್ರು.. ಕೊಡಿಸಿದ್ದು ಅಲ್ಲ. ಆದ್ರೆ, ಸಿದ್ದರಾಮಯ್ಯರನ್ನು ರಾಜ್ಯದ ಜನರು ಓಡಿಸಿದ್ರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು ಮೋದಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿರೋದಕ್ಕೆ ತಿರುಗೇಟು ಕೊಟ್ರು. ನರೇಂದ್ರ ಮೋದಿಯನ್ನು ಏಕವಚನದಲ್ಲಿ ಕರೆದ್ರೆ ದೇಶದ ಜನರು ಒಪ್ಪುತ್ತಾರಾ...? ಹಗರುವಾಗಿ ಮಾತಾಡೋದು ಎಷ್ಟು ಸರಿ ಎಂದು ಗುಡುಗಿದರು. ನಿಮ್ಮ ನೇತೃತ್ವದ ಯಾರದು ಎಂದು ಮೊದಲು ಹೇಳಲಿ ಎಂದು ತಿರುಗೇಟನ್ನೂ ಸಹ ಈ ಸಂದರ್ಭದಲ್ಲಿ ಕೊಟ್ಟರು.