ಆರ್ಯ ವೈಶ್ಯ ಸಂಸ್ಕೃತಿ ಸದನ ಉದ್ಘಾಟನೆ ಕಾರ್ಯಕ್ರಮ

ಶಿವಮೊಗ್ಗ : ಸೋಮಿನಕೊಪ್ಪ ರಸ್ತೆಯ ದೇವರಾಜ್ ಅರಸ್ ಬಡಾವಣೆಯಲ್ಲಿ ನಿರ್ಮಿಸಿರುವ ಆರ್ಯ ವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸುಮಾರು 2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಲ್ಯಾಣ ಮಂಟಪವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಅಂದ್ಹಾಗೆ ಈ ಮಂಟಪದಲ್ಲಿ 20 ಕೊಠಡಿಗಳಿದ್ದು ಸಭೆಗಳನ್ನು ನಡೆಸಲು ಕೂಡ ಅನುಕೂಲವಾಗುವಂತೆ ಭವನದ ನಿರ್ಮಾಣ ಮಾಡಲಾಗಿದೆ. ಜೊತೆಗೆ ಸಂಪೂರ್ಣ ಭವನಕ್ಕೆ ಎಸಿ ವ್ಯವಸ್ಥೆ ಕಲ್ಪಿಸಲಾಗಿದೆ. 400 ಜನರು ಭವನದಲ್ಲಿ ಕೂರಲು ಸ್ಥಳಾವಕಾಶವಿದ್ದು, 1000ಕ್ಕೂ ಹೆಚ್ಚು ಮಂದಿ ಒಟ್ಟಿಗೆ ಕೂರುವಂತಹ ಊಟದ ಹಾಲ್ ಇದೆ.