ಶಿವಮೊಗ್ಗ : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಕಲ ರೀತಿಯಲ್ಲಿ ಸಿದ್ಧವಾಗುತ್ತಿರುವ ಆಮ್ ಆದ್ಮಿ ಪಾರ್ಟಿಯ ಶಿವಮೊಗ್ಗ ಜಿಲ್ಲಾ ಕಚೇರಿ ಆರಂಭಿಸಿದೆ.
ನೂತನ ಕಚೇರಿಯ ಉದ್ಘಾಟನೆಯನ್ನು ರಾಜ್ಯ ಚುನಾವಣೆ ಉಸ್ತುವಾರಿ ತಂಡದ ಸದಸ್ಯರಾದ ಪುನೀತ್ ಸಿಂಗ್, ಕರ್ನಾಟಕ ರಾಜ್ಯ ಆಮ್ ಆದ್ಮಿ ಪಾರ್ಟಿಯ ವಲಯ ಸಂಚಾಲಕ ಕೆ.ದಿವಾಕರ್ ಹಾಗೂ ವಿ.ಗೋಪಾಲ್ ಅವರು ಉದ್ಘಾಟಿಸಿದರು. ಗಾಂಧಿ ಬಜಾರ್ ಎರಡನೇ ತಿರುವಿನ ಶಕ್ತಿ ಕಾಂಪ್ಲೆಕ್ಸ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಡಿ ಮೇಲೆ ನೂತನ ಕಚೇರಿ ಆರಂಭವಾಗಿದೆ.