ಶಿವಮೊಗ್ಗ: ಕೂಡ್ಲಿಯ ಸಂಗಮದಲ್ಲಿ ನಿನ್ನೆ ಹರೀಶ್ ಎಂಬ ಇಂಜಿನಿಯರಿAಗ್ ವಿದ್ಯಾರ್ಥಿ ಮೃತಪಟ್ಟಿದ್ದ. ಇವತ್ತು ಇನ್ನೊಬ್ಬ ಮಂಜು ಎಂಬ ಯುವಕ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಾಗ ಸ್ಥಳೀಯರು ಕಿರುಚಿದ್ದರಿಂದ ಸ್ಥಳದಲ್ಲೇ ಊಟ ಮಾಡುತ್ತಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಬೋಟಲ್ಲಿ ಹೋಗಿ ಯುವಕನನ್ನು ರಕ್ಷಿಸಿದ್ದಾರೆ.
ನಿನ್ನೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಹರೀಶ್ ಮೃತದೇಹ ಇನ್ನೂ ಸಿಕ್ಕಿಲ್ಲ. ಹುಡುಕಾಟ ಮುಂದುವರಿದಿದೆ. ಅಷ್ಟರಲ್ಲೇ ಈ ಒಂದು ಘಟನೆ ನಡೆದಿದೆ.