ಸೊರಬ: ಮನೆ ಕಟ್ಟಬೇಕು ಅಂತ ಹೋದ್ರೆ ಇದುವರೆಗೂ ಅನುಮತಿ ಸಿಕ್ಕಿಲ್ಲ. ಗ್ರಾಮ ಪಂಚಾಯ್ತಿಗೆ ಅಲೆದು ಅಲೆದು ಸುಸ್ತಾದವರು ಕೊನೆಗೆ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಈ ಸ್ವತ್ತು ಇದ್ದರೂ ಏಪ್ರಿಲ್‌ನಿಂದ ಇದುವರೆಗೂ ಗ್ರಾಪ ಪಂಚಾಯತಿಯವರು ಕಟ್ಟಡ ಕಟ್ಟೋದಕ್ಕೆ ಅನುಮತಿ ನೀಡಿಲ್ಲ. ರೇಕಾರ್ಡ್ ಕೂಡ ಕಳಿಸಿಕೊಟ್ಟಿಲ್ಲ. ಹಳೇ ಸೊರಬದ ಜನರು ನೀಡಿದ ದೂರಿನ ಮೇರೆಗೆ ಗ್ರಾಪ ಪಂಚಾಯತ್ ಪಿಡಿಒ ಅಧಿಕಾರಿಯ ಜೊತೆ ಕುಮಾರ್ ಬಂಗಾರಪ್ಪ ಮಾತಾಡಿ, ಆದಷ್ಟು ಬೇಗನೆ ದಾಖಲೆಗಳನ್ನು ಕಳಿಸಿಕೊಡೋದಕ್ಕೆ ಸೂಚನೆ ಕೊಟ್ಟಿದ್ದಾರೆ. ಹಾಗಾದ್ರೆ ಹಳೇ ಸೊರಬದ ವ್ಯಕ್ತಿ ಮತ್ತು ಶಾಸಕರು ನಡೆಸಿದ ದೂರವಾಣಿ ಸಂಭಾಷಣೆ ಮತ್ತು ಪಿಡಿಒ ಜೊತೆ ನಡೆಸಿದ ದೂರವಾಣಿ ಸಂಭಾಷಣೆ ಇಲ್ಲಿದೆ.