ಶಿವಮೊಗ್ಗ : ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಶವಂತಪುರ - ಶಿವಮೊಗ್ಗ ಟೌನ್ - ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಡಿಸೆಂಬರ್ 25ರಿಂದ ಡಿಸೆಂಬರ್ 31ರವರೆಗೆ ಒಂದು ವಾರಗಳ ಕಾಲ ತಾತ್ಕಾಲಿಕವಾಗಿ ಈ ಬೋಗಿ ಅಳವಡಿಸಲಾಗಿದೆ.
ಅಂದ್ಹಾಗೆ ಈ ವಿಸ್ಟಾಡೋಮ್ ಬೋಗಿಗಳು ಮಾಮೂಲಿ ಬೋಗಿಗಳಂತೆ ಇರುವುದಿಲ್ಲ. ಈ ಬೋಗಿಗಳಲ್ಲಿ ಎಸಿ ಸೀಟರ್‌ಗಳಿದ್ದು, ಇವುಗಳನ್ನು ಯಾವುದೇ ದಿಕ್ಕಿಗೆ ಬೇಕಾದರು ತಿರುಗಿಸಬಹುದಾಗಿದೆ. ದೊಡ್ಡ ಗಾಜಿನ ಕಿಟಕಿಗಳು ಹಾಗೂ ಗಾಜಿನ ಛಾವಣಿಯೂ ಇರಲಿದ್ದು ಪ್ರಕೃತಿ ಸೌಂದರ್ಯ ಸವಿಯಲು ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ-ಯಶವಂತಪುರ ಮಾರ್ಗವಾಗಿ ಸಂಚರಿಸುತ್ತಿರುವ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಜೋಡಣೆ ಮಾಡಲಾಗಿದೆ. ಈ ಬೋಗಿಯಲ್ಲಿ 44 ಪ್ರಯಾಣಿಕರು ಸಂಚಾರ ಮಾಡಬಹುದು. ಇದರ ಟಿಕೇಟ್ ದರ 1150 ರೂಪಾಯಿಯಾಗಿದೆ.