ಶಿವಮೊಗ್ಗ : ಕರ್ನಾಟಕದಲ್ಲಿ ಕಾಂಗ್ರೆಸ್ ಅರಾಜಕತೆಯನ್ನ ಸೃಷ್ಟಿ ಮಾಡುತ್ತಿದೆ. ಕಾಂಗ್ರೆಸ್‌ನ ಹಲವು ನಾಯಕರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಹೆಚ್ಚಿದೆ. ರಾಷ್ಟ್ರಭಕ್ತಿ ಇಲ್ಲದಿದ್ದರೆ ನೀವು ಪಾಕಿಸ್ತಾನಕ್ಕೆ ಹೋಗಿಬಿಡಿ ಎಂದು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರಧ್ವಜ ಕಿತ್ತು ಹಾಕಿ ಖಲಿಸ್ಥಾನದ ಧ್ವಜವನ್ನ ಹಾರಿಸಿದಾಗ ಆ ಕುರಿತು ಯಾರು ಮಾತನಾಡಲಿಲ್ಲ. ಆದರೆ ಯಾವ ಧ್ವಜವೂ ಇಲ್ಲದ ಕಂಬದಲ್ಲಿ ಭಗವಾಧ್ವಜ ಹಾರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಬಿಜೆಪಿ ಕಾರ್ಯಾಲಯ ಎಂದರೆ ದೇವಸ್ಥಾನವಿದ್ದಂತೆ. ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಬಂದು ಪಾಪ ಕಳೆದುಕೊಂಡಿದ್ದಾರೆ. ಆದರೆ ನಲಪಾಡ್ ನೇತೃತ್ವದಲ್ಲಿ ಸಚಿವ ಈಶ್ವರಪ್ಪನವರ ಫೋಟೊಗೆ ತುಳಿದು ಅಪಮಾನ ಮಾಡಿ ಮತ್ತೆ ಪಾಪ ಸಂಪಾದಿಸಿದ್ದೀರಿ ಎಂದು ದೂರಿದರು.