ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಫೆಬ್ರವರಿ ೨೭ರಂದು ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಯಡಿಯೂರಪ್ಪ ಧ್ರೋಬಾಲ್ ಕಪ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಥ್ರೋ ಬಾಲ್ ಅಸೋಸಿಯೇಶನ್ ಪಂದ್ಯಾವಳಿ ಆಯೋಜನೆ ಮಾಡಿದೆ. ಪಂದ್ಯಾವಳಿಯು ಪುರಷ, ಮಹಿಳೆ ಹಾಗೂ ಪ್ರೌಢ ಶಾಲಾ ಬಾಲಕ ಹಾಗೂ ಬಾಲಕೀಯರ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಪ್ರೌಢ ಶಾಲಾ ವಿಭಾಗದಲ್ಲಿ ಭಾಗವಹಿಸುವ ಬಾಲಕ ಹಾಗೂ ಬಾಲಕೀಯರು 17 ವರ್ಷದೊಳಗಿನವರು ಆಗಿರಬೇಕು ಎಂದು ಜಿಲ್ಲಾ ಥ್ರೋ ಬಾಲ್ ಅಸೋಸಿಯೇಶನ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದೆ.