ಎನ್‌ಇಎಸ್ ಮೈದಾನದಲ್ಲಿ ಮಹಿಳಾ ದಸರಾ ಕ್ರೀಡಾಕೂಟ

ಹೈಲೆಟ್ಸ್ : 

ಎನ್‌ಇಎಸ್ ಮೈದಾನದಲ್ಲಿ ಮಹಿಳಾ ದಸರಾ ಕ್ರೀಡಾಕೂಟ
ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ ಚಾಲನೆ
ಮಹಿಳೆಯರಿಗೆ ವಿವಿಧ ಕ್ರೀಡೆಗಳ ಆಯೋಜನೆ
ನಾಲ್ಕು ದಿನಗಳ ಕಾಲ ನಡೆಯುವ ಮಹಿಳಾ ದಸರಾ

ಶಿವಮೊಗ್ಗ : ದಸರಾ ಪ್ರಯುಕ್ತ ಮಹಿಳಾ ದಸಾರವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತಿದ್ದು, ಮಹಿಳಾ ದಸರಾ ಕ್ರೀಡಾಕೂಡಕ್ಕೆ ಚಾಲನೆ ನೀಡಲಾಗಿದೆ. ಎನ್‌ಇಎಸ್ ಮೈದಾನದಲ್ಲಿ ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಬಾರಿ ಮಹಿಳಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಯಸ್ಸಿಗೆ ಅನುಗುಣವಾಗಿ ಕೆಲವು ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಗನ್ನಿ ಶಂಕರ್, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ ಸೇರಿದಂತೆ ಮತ್ತಿತರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.