ಜೂನ್ ೧೧ರಂದು ವಿಪ್ರ ಯುವಜನ ಸಮಾವೇಶ 

ಶಿವಮೊಗ್ಗ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಜೂನ್ ೧೧ರಂದು ವಿಪ್ರ ಯುವಜನ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ನಡೆಯುವ ಸಮಾವೇಶದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಯುವ ವಿಭಾಗದ ರಾಜ್ಯ ಸಂಚಾಲಕ ಸಂದೀಪ್ ರವಿ ಆಗಮಿಸಲಿದ್ದಾರೆ. ಹಾಗೇನೆ ಸಮಾವೇಶದಲ್ಲಿ ಗೌರವ ಉಪಸ್ಥಿತರಾಗಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಕೆಎಸ್‌ಎಸ್‌ಐಡಿಸಿ ರಾಜ್ಯ ಉಪಾಧ್ಯಕ್ಷ ಎಸ್.ದತ್ತಾತ್ರಿ ಭಾಗಿಯಾಗಲಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ರವಿಕುಮಾರ್ ನುಗ್ಗೆಮಕ್ಕಿ ಸಮಾವೇಶದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ಶಿವಮೊಗ್ಗ ಘಟಕದ ವತಿಯಿಂದ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.