ಶಿವಮೊಗ್ಗ : ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗದೆ ಇದ್ದಿದ್ದರೆ ಶಿವಮೊಗ್ಗದ್ದಲ್ಲಿ ಏರ್‌ಪೋರ್ಟ್‌ಅನ್ನು ನಾವು ಕನಸಿನಲ್ಲಿಯೂ ಕಾಣಲಿಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರನ್ನು ಇಡಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ರು.
ಕುವೆಂಪು ರಂಗಮಂದಿರಲ್ಲಿ ನಡೆದ ಬಿ.ಎಸ್.ಯಡಿಯೂರಪ್ಪಗೆ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಮನೆಗೂ ಯಡಿಯೂರಪ್ಪ ಅವರ ಯೋಜನೆಗಳು ತಲುಪಿವೆ. ಏರ್‌ಪೋರ್ಟ್‌ಗೆ ಅನೇಕ ಹೆಸರುಗಳು ಕೇಳಿ ಬರುತ್ತಿವೆ. ಮುಂದೊಂದು ದಿನ ಯಾರಾದರು ಹೊರಗಿನವರು ಬಂದು ಈ ಏರ್‌ಪೋರ್ಟ್‌ಗೆ ಯಾಕೆ ಯಡಿಯೂರಪ್ಪನವರ ಹೆಸರಿಟ್ಟಿದ್ದೀರಿ ಎಂದು ಕೇಳಿದರೆ ಅದಕ್ಕೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಉತ್ತರ ಕೊಡ್ತಾವೆ. ಆದ್ದರಿಂದ ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ಏರ್‌ಪೋರ್ಟ್‌ಗೆ ಯಡಿಯೂರಪ್ಪರ ಹೆಸರಿಡಬೇಕೆಂದು ಸಚಿವ ಈಶ್ವರಪ್ಪ ಒತ್ತಾಯಿಸಿದ್ರು.