ಕೆ.ಎಸ್.ಈಶ್ವರಪ್ಪ ಯಾಕೆ ರಾಜಿನಾಮೆ ಕೊಡಬೇಕು? 

ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ಯಾಕೆ ರಾಜಿನಾಮೆ ಕೊಡಬೇಕು. ಅವರದ್ದು ತಪ್ಪೇನಿದೆ. ಇಂತಹ ಸಾವಿರಾರು ಹೇಳಿಕೆಗಳನ್ನ ಕಾಂಗ್ರೆಸ್‌ನವರು ಕೊಟ್ಟಿದ್ದಾರೆ. ಅವರೆಲ್ಲರಿಗೂ ರಾಜೀನಾಮೆ ತೆಗೆದುಕೊಂಡಿದ್ದಾರ ಎಂದು ಜಿಲ್ಲಾ ಉಸ್ತುವರಿ ಸಚಿವ ಕೆ.ಸಿ.ನಾರಾಯಣಗೌಡ ಪ್ರಶ್ನಿಸಿದರು.

ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ನವರಿಗೆ ಮಾಡಲು ಏನ್ ಕೆಲಸ ಇದೆ. ಅವರು ವಿರೋಧ ಪಕ್ಷದಲ್ಲಿದ್ದುಕೊಂಡು ವಿರೋಧ ಮಾಡಬೇಕು, ಗೊಂದಲ ಸೃಷ್ಟಿ ಮಾಡಬೇಕು, ಸರ್ಕಾರ ಸರಿಯಾಗಿ  ಕಾರ್ಯನಿರ್ವಹಿಸಲು ಬಿಡದೇ ಇರುವುದೇ ವಿರೋಧ ಪಕ್ಷದ ಕೆಲಸ ಅಂದುಕೊಂಡಿದ್ದಾರೆ. ವಿರೋಧ ಪಕ್ಷವರು ಅಭಿವೃದ್ಧಿ ಕೆಲಸಗಳಿಗೆ ನಮ್ಮ ಜೊತೆ ಕೈ ಜೋಡಿಸುತ್ತಿಲ್ಲ. ಸದನವನ್ನ ಸರಿಯಾಗಿ ನಡೆಸಲು ಬಿಡ್ತಾಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.