ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳು ವಿಚಾರಣೆ ವೇಳೆ ಏನ್ ಹೇಳಿದ್ರು?

ಶಿವಮೊಗ್ಗ : ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿಗಳಿಂದ ಸತ್ಯ ಬಾಯ್ಬಿಡಿಸುವಲ್ಲಿ ನಿರತರಾಗಿದ್ದಾರೆ. ೨೦೧೮ರಲ್ಲಿ ರೌಡಿ ಶೀಟರ್ ಬಂಕ್ ಬಾಲುವನ್ನು  ಶಿವಮೊಗ್ಗದ ಹೊರವಲಯದಲ್ಲಿ ಹತ್ಯೆ ಮಾಡಲಾಗಿತ್ತು. ಆ ಹತ್ಯೆಗೆ ಪ್ರತಿಕಾರವಾಗಿಯೇ ಹಂದಿ ಅಣ್ಣಿಯನ್ನು ಮುಗಿಸಲಾಗಿದೆ.

ಆ ಹತ್ಯೆ ನಡೆಯುವಾಗ ಈಗ ಅರೆಸ್ಟ್ ಆಗಿರುವ ಕಾಡಾ ಕಾರ್ತಿಕ್ ಸಹ ಜೊತೆಯಲ್ಲಿಯೇ ಇದ್ದನು. ಅದೇ ದಿನ ಪ್ರತಿಕಾರ ತೆಗೆದುಕೊಳ್ಳೋದಾಗಿ ಶಪತ ಕೂಡ ಮಾಡಿದ್ದನು. ಕಾಡಾ ಕಾರ್ತಿಕ್, ಫಾರುಕ್, ನಿತಿನ್ ಹಾಗೂ ಮಧು ನಾಲ್ವರೂ ಬಂಕ್ ಬಾಲು ಸಹಚರರಾಗಿದ್ದರು. ಶಿವಮೊಗ್ಗಕ್ಕೆ ಬಂದರೆ ನಿನ್ನನ್ನ ಬಿಡಲ ಅಂತ ಹಂದಿ ಅಣ್ಣಿ ವಾರ್ನಿಕ್ ಕೂಡ ಮಾಡಿದ್ದನಂತೆ. ಅದೇ ಕಾರಣಕ್ಕೆ ಕಾಡಾ ಕಾರ್ತಿಕ್ ಬೆಂಗಳೂರಿನಲ್ಲಿಯೇ ಅಲೆದಾಡುಕೊಂಡು ಇದ್ದನು. ಅಲ್ಲದೆ ತನ್ನ ಸಹೋದರಿಯ ವಿವಾಹದ ಟೈಮ್‌ನಲ್ಲೂ ಆತ ಶಿವಮೊಗ್ಗಕ್ಕೆ ಕಾಲಿಟ್ಟಿರಲಿಲ್ಲ.

ಈ ಎಲ್ಲಾ ಕಾರಣಗಳಿಂದಲೇ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರೋದು ಪೊಲೀಸರ ತನಿಖೆಯ ವೇಳೆ ಹೊರಗೆ ಬಂದಿದೆ. ಇನ್ನು ಜುಲೈ ೧೪ ರಂದು ಬೆಳಗ್ಗೆ ೧೦.೪೫ಕ್ಕೆ ರೌಡಿ ಹಂದಿ ಅಣ್ಣಿಯ ಕಥೆ ಮುಗಿಸಿದ ಆರೋಪಿಗಳು ಅಲ್ಲಿಂದ ಕಾರ್‌ನಲ್ಲಿ ಪರಾರಿಯಾಗಿದ್ದಾರೆ. ಲಕ್ಷ್ಮೀ ಟಾಕೀಸ್ ಬಳಿ ಕಾರ್ ಬದಲಾವಣೆ ಮಾಡಿಕೊಂಡು ಹೊನ್ನಾಳಿಗೆ ತೆರಳಿದ್ದಾರೆ. ಅದೇ ಮಾರ್ಗದಲ್ಲಿ ಸಿಗೋ ಕೆರೆಯೊಂದರಲ್ಲಿ ಮಾರಕಾಸ್ತ್ರಗಳನ್ನು ಎಸೆದು ಹೋಗಿದ್ದಾರೆ. ಬಳಿಕ ಹರಿಹರ, ಹುಬ್ಬಳ್ಳಿ, ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿಂದ ಅರಸೀಕೆರೆಗೆ ಬಂದು ಚಿಕ್ಕಮಗಳೂರಿಗೆ ತೆರಳಿ ಶರಣಾಗತಿಯಾಗಿದ್ದಾರೆ. ನಾಲ್ಕು ದಿನಗಳನ್ನು ಸುತ್ತಾಡಿಕೊಂಡು ಟೈಮ್ ಪಾಸ್ ಮಾಡಿರುವ ಆರೋಪಿಗಳು ತಾವೇ ಕೊಲೆ ಮಾಡಿದ್ದು ಅಂತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ೨೦೧೮ರ ರೌಡಿ ಶೀಟರ್ ಬಂಕ್ ಬಾಲು ಕೊಲೆಯ ಕಾರಣಕ್ಕೆ ನಾಲ್ಕು ವರ್ಷಗಳ ನಂತರ ಹಗೆ ಸಾಧಿಸಿ ಮತ್ತೆ ಕೊಲೆಯಾಗಿರೋದು ತನಿಖೆಯ ವೇಳೆ ಕಂಡು ಬಂದಿದೆ.