ಸಿದ್ದರಾಮೋತ್ಸವ ವಿಚಾರವಾಗಿ ಕೆಎಸ್‌ಈ ಏನ್ ಹೇಳಿದ್ರು?

ಶಿವಮೊಗ್ಗ : ಸಿದ್ದರಾಮೋತ್ಸವ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಎರಡು ಭಾಗ ಆಗುವುದರಲ್ಲಿ ಯಾವ ಅನುಮಾನ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಚುನಾವಣೆಗೆ ಮುನ್ನವೆ ಕಾಂಗ್ರೆಸ್ ಎರಡು ಭಾಗ ಆಗುತ್ತದೆ. ಬಹಿರಂಗವಾಗಿ ನನಗೂ ಸಿದ್ದರಾಮಯ್ಯ ಅವರಿಗೆ ವೈಮನಸ್ಸು ಇದೆ ಅಂತಾ ಒಪ್ಪಿಕೊಳ್ಳದ ಡಿಕೆಶಿ ನಾಚಿಕೆಗೇಡಿನ ಹೇಳಿಕೆ ಕೊಟ್ಟಿದ್ದಾರೆ. ನಾನು ಸಿದ್ದರಾಮೋತ್ಸವ ವಿರೋಧ ಮಾಡ್ತೀನಿ ಅಂತಾ ಡಿಕೆಶಿ ಧೈರ್ಯವಾಗಿ ಹೇಳಬಹುದಿತ್ತು. ಅದನ್ನು ಬಿಟ್ಟು ಶಿಖಂಡಿ ರೀತಿ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಗೆಲ್ತಾರೋ, ಸೋಲ್ತಾರೋ ಅನ್ನೋದೆ ಇನ್ನು ಗೊತ್ತಿಲ್ಲ. ಅದ್ರಲ್ಲು ಸಿದ್ದರಾಮಯ್ಯನಿಗೆ ಇನ್ನು ಕ್ಷೇತ್ರವೇ ಗೊತ್ತಿಲ್ಲ ಆಗಲೇ ಮುಖ್ಯಮಂತ್ರಿ ಅಂತಾರೆ. ಜನರು ಎಲ್ಲವನ್ನು ನೋಡ್ತಾಯಿದ್ದು ಇಬ್ಬರನ್ನು ಸೋಲಿಸಲಿದ್ದಾರೆ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 

ಲೀನಾ ಮಣಿಮೇಕಲೈ ವಿರುದ್ಧ ಕಿಡಿ

ಇನ್ನು ಕಾಳಿಕಾಂಬೆಯನ್ನು ವಿಕೃತವಾಗಿ ಚಿತ್ರಿಸಿರುವ ಲೀನಾ ಮಣಿಮೇಕಲೈ ವಿರುದ್ಧ ವಾಗ್ದಾಳಿ ನಡೆಸಿರುವ ಈಶ್ವರಪ್ಪ ಭಾರತೀಯ ಸಂಸ್ಕೃತಿ ಇಡೀ ಪ್ರಪಂಚಕ್ಕೆ ಶಾಂತಿ ಕೊಡುತ್ತಿದೆ. ಇಡೀ ಪ್ರಪಂಚವನ್ನು ಒಟ್ಟಿಗೆ ಸೇರಿಸುತ್ತಿದೆ. ಯಾರೋ ರಸ್ತೆಲಿ ಹೋಗುವವರು ಕಾಳಿಮಾತೆಗೆ ಸಿಗರೇಟ್ ಕೊಟ್ಬಿಟ್ರೆ ಮಾತೆಯ ಗೌರವ ಕಡಿಮೆ ಆಗೊಲ್ಲ. ಕಾಳಿ ದುಷ್ಟಸಂಹಾರ ಮಾಡುವ ಮಾತೆ ಎಂದು ಕಿಡಿಕಾರಿದ್ದಾರೆ.