ಶಿವಮೊಗ್ಗ : ಠಾಣೆಗೆ ಬರುವ ದೂರುದಾರರೊಂದಿಗೆ ಪೊಲೀಸರು ಹೇಗೆ ವರ್ತಿಸಬೇಕು, ಸಮುದಾಯದ ಸಹಭಾಗಿತ್ವದಲ್ಲಿ ಕ್ರೈಂ ಗಳನ್ನು ತಡೆಯುವುದು ನಮ್ಮ ಪ್ರಥಮ ಆದ್ಯತೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಡಿ.ಎ.ಆರ್‌ಗೆ ಡ್ಯಾಂ ಗಳ ನಿರ್ವಹಣೆ ಜವಬ್ದಾರಿ ವಹಿಸಲಾಗಿತ್ತು. ಆದರೆ ಈಗ ಡ್ಯಾಂ ಗಳ ಜವಬ್ದಾರಿಯನ್ನು ಕೆ.ಎಸ್.ಐ.ಸಿ.ಎಫ್ ಗೆ ವಹಿಸಲಾಗಿದೆ. ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಲವು ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಇಷ್ಟು ದಿನ ಡ್ಯಾಂಗಳ ಭದ್ರತೆಯ ಹೊಣೆ ಹೊತ್ತಿದ್ದ ಡಿ.ಎ.ಆರ್ ನಿಂದ ಈಗ ಕೆ.ಎಸ್.ಐ.ಸಿ.ಎಫ್ ಗೆ ಡ್ಯಾಂ ಗಳ ಭದ್ರತಾ ನಿರ್ವಹಣೆಯ ಜವಬ್ದಾರಿ ವಹಿಸಲಾಗಿದೆ.ಇನ್ನು ಐಎಸ್‌ಡಿ ನಿಯಂತ್ರಣದಲ್ಲಿ ಡ್ಯಾಂಗಳು ಭದ್ರತೆ ಇರುತ್ತೆ. ಶಿವಮೊಗ್ಗ ಸಿಟಿ ಹಾಗು ಹೊರ ವಲಯದಲ್ಲಿ ಹೆಚ್ಚಾಗಿದ್ದ ಗಾಂಜಾ ಮಾರಾಟ ಈಗ ನಿಯಂತ್ರಣಕ್ಕೆ ಬಂದಿದೆ. ಈ ಹಿಂದೆಲ್ಲಾ ನಿರ್ದಿಷ್ಟ ಸ್ಥಳಗಳಲ್ಲಿ ನಿಂತರೆ ಅನಾಯಾಸವಾಗಿ ಗಾಂಜ ಸಿಗುತ್ತಿತ್ತು. ಆದರೆ ಈಗ ನಡೆಯುತ್ತಿರುವ ನಿರಂತರ ದಾಳಿಯಿಂದ ಗಾಂಜಾ ಸಿಗುವುದು ಕಷ್ಟವಾಗಿದೆ.
ಈಗ ಗಾಂಜಾ ಮಾರಾಟದ ಮೋಡಸ್ ಬದಲಾಗಿದೆ. ಪರಿಚಯವಿದ್ದವರು ಫೋನ್ ಕಾಲ್ ಮಾಡಿದ್ರೆ, ಅಂತವರಿಗೆ ಮಾತ್ರ ಗಾಂಜಾ ಪೂರೈಕೆಯಾಗುತ್ತಿರುವುದು ಗೊತ್ತಾಗಿದೆ ಎಂದು ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ. ಗಾಂಜಾ ಪೆಡ್ಲರ್ ಹಾಗೂ ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆಂದ್ರ ಪ್ರದೇಶದಿಂದ ಪೂರೈಕೆಯಾಗುತ್ತಿದ್ದ ಗಾಂಜಾದ ಮೇಲೆ ನಮ್ಮ ಪೊಲೀಸರು ನಿಯಂತ್ರಣ ಸಾಧಿಸಿದ್ದಾರೆ. ಆದರೂ ಗಾಂಜಾ ಬಳ್ಳಾರಿ ಚೆನ್ನಗಿರಿ ತರೀಕೆರೆಯಂತ ಹೊರವಲಯದಲ್ಲಿ ಒಂದು ಅಥವಾ ಎರಡು ಕೇಜಿಯ ಪ್ಯಾಕ್‌ನಲ್ಲಿ ಬರುತ್ತಿದೆ. ಮೊದಲು ಗಾಂಜಾ ವ್ಯಸನಿಗಳನ್ನು ಪರೀಕ್ಷಿಸಿದಾಗ 10 ಕೇಸ್ ಗಳಲ್ಲಿ 6-7 ಕೇಸ್‌ಗಳಲ್ಲಿ ಸೇವನೆ ಖಾತರಿಯಾಗ್ತಿತ್ತು. ಆದ್ರೆ ಈಗ ಒಂದೆರೆಡು ಕೇಸ್ ಗಳು ಸಿಕ್ಕರೂ ಹೆಚ್ಚು. ಗಾಂಜಾದಿಂದ ವ್ಯಸನಿಗಳು ಮುಕ್ತರಾಗುತ್ತಿದ್ದಾರೆ. ಈ ವರ್ಷ ಗಾಂಜಾ ಎಕ್ಸೈಸ್ ಮಟ್ಕಾ ನಿಯಂತ್ರಣದ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು.
ಹಳ್ಳಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಶೇಕಡಾ 80 ರಷ್ಟು ಮದ್ಯ ಮಾರಾಟವನ್ನು ಕಡಿಮೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ.ಎಲ್ಲಿವರೆಗೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಇರುತ್ತೋ, ಅಲ್ಲಿಯವರೆಗೆ ಕ್ರೈಂ ಗಳ ಸಂಖ್ಯೆ ಹೆಚ್ಚಳವಾಗುತ್ತೆ. ಮದ್ಯದ ಮೇಲೆ ನಿಯಂತ್ರಣ ಸಾಧಿಸಿದ್ರೆ ಅಪರಾಧಗಳು ಕಡಿಮೆಯಾಗುತ್ತದೆ ಎಂದು ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಅಪರಾಧ ತಡೆಯಲು ಈ ವರ್ಷ ಮಾಡಿಕೊಂಡಿರೋ ಪ್ಲಾನ್‌ಗಳೇನು?
1. ಅಪಘಾತ ಸ್ಥಳಗಳ ಗುರುತಿಸಿ ಬ್ಯಾರಿಕೇಡ್ ಹಂಪ್ಸ್ ಅಳವಡಿಕೆ
ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆಯನ್ನು 2019-20 ಕ್ಕೆ ಹೋಲಿಸಿದರೆ,ಈಗ ಶೇಕಡಾ 30 ರಷ್ಟು ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರೂ ಅದರಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗುತ್ತೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೂಡಿ ಅಪಘಾತ ವಲಯಗಳನ್ನು ಗುರುತಿಸಿ, ಎಲ್ಲೆಲ್ಲಿ ಹಂಪ್ಸ್ ಬ್ಯಾರಿಕೇಡ್ ಗಳನ್ನು ಹಾಕಬೇಕೆಂದು ಚಾರ್ಟ್ ಸಿದ್ದಪಡಿಸಲಾಗಿದೆ ಎಂದು ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
2. ಶಾಲಾ ಮಕ್ಕಳು ಶಿಕ್ಷಕರ ಸಮಸ್ಯೆ ಅರಿಯುವ ಯತ್ನ
ಶಾಲಾ ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಅರಿಯಲು ಅವರ ಶಿಕ್ಷಕರೊಂದಿಗೆ ಜೊತೆಗೂಡಿ,ಅವರಿಗೆ ಪೊಲೀಸರಿಂದ ಅವರಿಗೆ ಬೇಕಾಗುವ ನೆರವು ರಕ್ಷಣೆ ಹಾಗು ಅವರ ಸಮಸ್ಯೆ ಬಗೆಹರಿಸುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ವಾಟ್ಸಾಪ್ ಗ್ರೂಪ್ ಮಾಡಲಾಗಿದೆ ಎಂದು ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ. ಟೀಚರ್ಸ್ ಗಳು ತಮಗೇನಾದ್ರು ಸಮಸ್ಯೆಗಳಾದ್ರೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕುತ್ತಿದ್ದಾರೆ. ಪೊಲೀಸರು ತಕ್ಷಣ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸೆಕ್ಯುರಿಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
3. ಪೊಲೀಸ್ ಇಮೇಜ್‌ನ್ನು ಹತ್ತು ಪಸೆಂಟ್ ಹೆಚ್ಚಿಸಲು ಯೋಜನೆ
ಪೊಲೀಸರ ಬಗ್ಗೆ ಈಗಿರುವ ಇಮೇಜ್‌ನ್ನು ಇನ್ನು ಹತ್ತು ಪಸೆಂಟ್ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಸಮಾಜದಲ್ಲಿ ಕಾರ್ಮಿಕರು,ವರ್ತಕರು ಹಣ್ಣು ಮಾರುವವರು, ಆಟೋಚಾಲಕರು ಸೇರಿದಂತೆ ಎಲ್ಲಾ ವರ್ಗದವರು ಹೊಂದಿರವ ವಾಟ್ಸಾಪ್ ಗ್ರೂಪ್ ಗಳಿಗೆ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ, ಗ್ರೂಪ್ ಗಳಲ್ಲಿ ಪೊಲೀಸರಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದನ್ನು ಹೇಗೆ ಬಗೆಹರಿಸಬೇಕೆಂಬ ಪ್ರಯತ್ನ ಶುರುವಾಗಿದೆ.
4. ಜನಸ್ನೇಹಿ ಪೊಲೀಸ್ ಠಾಣೆಗೆ ಒತ್ತು
ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರನ್ನು ಅಧಿಕಾರಿ ಸಿಬ್ಬಂದಿಗಳು ಹೇಗೆ ನೋಡಿಕೊಳ್ಳಬೇಕೆಂಬುದರ ಬಗ್ಗೆ ಎಲ್ಲರಿಗೂ ತರಬೇತಿ ನೀಡಲಾಗುವುದು. ಠಾಣೆಗಳಿಗೆ ಬರುವವರು ಎಂತೆಂತಾ ದೂರುಗಳನ್ನು ಇಟ್ಟುಕೊಂಡು ಬರುತ್ತಾರೆ, ಠಾಣೆಗೆ ಬರುವ ಮಕ್ಕಳು ಮಹಿಳೆಯು ವಯೋವೃದ್ಧರೊಂದಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ತರಬೇತಿ ನೀಡಲಾಗುವುದು.
5. ಹಳ್ಳಿಗಳಲ್ಲಿ ಬೀಟ್ ಪೊಲೀಸಿಂಗ್‌ಗೆ ಹೆಚ್ಚಿನ ಆದ್ಯತೆ
ಬೀಟ್ ಸಿಸ್ಟಮ್‌ಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಹಳ್ಳಿಗಳಲ್ಲಿ ಬೀಟ್‌ಗೆ ಹೋಗುವ ಕ್ರೈಂ ಪೊಲೀಸರಿಗೆ ಹಳ್ಳಿಯ ಸಮಗ್ರ ಮಾಹಿತಿ ಇರಬೇಕು. ಕಳ್ಳರು ರೌಡಿಗಳು ಸಮಾಜದ ಗಣ್ಯ ವ್ಯಕ್ತಿಗಳ ಅರಿವು ಪೊಲೀಸಿಗಿರಬೇಕು. ಇನ್ನು ಆರು ತಿಂಗಳಲ್ಲಿ ಪರಣಾಮಕಾರಿಯಾಗಿ ಜಾರಿ ಮಾಡಲಾಗುವುದು.
6. ಸಕಾಲದಲ್ಲಿ ಪೊಲೀಸ್ ವೆರಿಫಿಕೇಷನ್
ಪಾಸ್ ಪೋಸ್ಟ್ ವೆರಿಫಿಕಷನ್ , ಉದ್ಯೋಗ ಇತರೆ ಸರ್ಕಾರಿ ಕೆಲಸಗಳಿಗಾಗಿ ಪೊಲೀಸ್ ವೆರಿಫಿಕೇಷನ್‌ಗೆ ಬರುವ ಅರ್ಜಿಗಳ ವಿಳಂಬವನ್ನು ಶೇಕಡಾ ೫೦ ರಷ್ಟು ಕಡಿಮೆ ಮಾಡಬೇಕೆಂಬ ಗುರಿ ಹೊಂದಲಾಗಿದೆ.
7. ಮಟ್ಕಾ ಕೇಸ್ ಹೆಚ್ಚಳ ಮಾಡುವ ಗುರಿ.
ಮಟ್ಕಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.ಕೆಪಿ ಆಕ್ಟ್ ನಲ್ಲಿ 66 ಕೇಸ್ ನಲ್ಲಿ 42 ಅರೆಸ್ಟ್ ಜೈಲಿಗೆ ಕಳುಹಿಸಲಾಗಿದೆ.
ಮಟ್ಕಾ ಕೇಸನ್ನು ಹೆಚ್ಚಿಸಲಾಗುವುದು.
8. ಪೊಲೀಸರಿಗೆ ಪ್ರಾಯೋಗಿಕ ತರಬೇತಿ
ಸಮಾಜದಲ್ಲಿ ವಿವಿಧ ಸಂಧರ್ಭಗಳಲ್ಲಿ ನಡೆಯುವ ಅವಘಡಗಳನ್ನು ಕೋಮುಗಲಭೆಗಳನ್ನು ಪೊಲೀಸರು ಹೇಗೆ ಎದುರಿಸಬೇಕೆಂಬುದನ್ನು ಪೊಲೀಸರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.
9. ವಾಹನ ಅಪಘಾತ ತಡೆಗೆ ಕ್ರಮ
ವೆಹಿಕಲ್ ಅಪಘಾತಗಳನ್ನು ಈ ಬಾರಿ ಶೇಕಡಾ ೧೦ ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ.
ರಾಬರಿ ಕಳ್ಳತನದಂತ ಅಪರಾಧಗಳನ್ನು ಶೇಕಡಾ ೧೦ ರಷ್ಟು ಕಡಿಮೆ ಮಾಡಲಾಗುವುದು.
ಪ್ರಾಪರ್ಟಿ ರಿಕವರಿ ಪ್ರಸ್ಥುತ ಪ್ರಸ್ಥುತ ೪೫ ಪಸೆಂಟ್ ಇದ್ದು ಅದನ್ನು ೫೫ ಪಸೆಂಟ್ ಗೆ ಗೆ ಹೆಚ್ಚಿಸುವ ಪ್ಲಾನ್ ಇದೆ.
ಸ್ಟೇಷನ್ ಆವರಣದಲ್ಲಿರುವ ಜಪ್ತಿ ಮಾಡಿರುವ ವಾಹನಗಳನ್ನು ಒಂದೆಡೆ ವಿಲೇವಾರಿ ಮಾಡಿ ಸ್ಟೇಷನ್ ನ್ನು ಕ್ಲೀನ್ ಮಾಡುವ ಉದ್ದೇಶ.
10. ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಆದ್ಯತೆ.
ಅಪರಾಧ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗಿದೆ. ಗೃಹ ಸಚಿವರು ಈ ಬಗ್ಗೆ ಪ್ರಸ್ಥಾಪಿಸಿದ್ದು, ಶಿಕ್ಷೆ ಪ್ರಮಾಣವನ್ನು ಈಗಿರುವುದಕ್ಕಿಂತ ದುಪ್ಪಟ್ಟು ಮಾಡಲು ಉದ್ದೇಶಿಸಲಾಗಿದೆ. ಅಪಘಾತ ಪ್ರಕರಣಗಳಲ್ಲಿ ಹಾಗು ಅಪರಾಧ ಪ್ರಕಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಹಾಗು ಮಾದ್ಯಮ ಅಕಾಡೆಮಿ ಸದಸ್ಯರಾದ ಗೋಪಾಲ್ ಯಡಿಗೆರೆ ಉಪಸ್ಥಿತರಿದ್ದರು.