ಶಿವಮೊಗ್ಗ : ರಾಮನ ಅಯೋಧ್ಯೆ ನಮಗೆ ಸಿಕ್ಕಿದೆ. ಅದೇ ರೀತಿ ಕೃಷ್ಣನ ಮಥುರ ಹಾಗೂ ಈಶ್ವರನ ಕಾಶಿಯನ್ನು ಕೂಡ ಕಾನೂನು ಹೋರಾಟದ ಮೂಲಕವೆ ನಮ್ಮ ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ದೇಶಾದ್ಯಂತ ಜ್ಞಾನವ್ಯಾಪಿ ಮಸೀದಿ ಚರ್ಚೆ ಜೋರಾಗಿರುವ ಬೆನ್ನೆಲ್ಲೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜ್ಞಾನವ್ಯಾಪಿ ಮಸೀದಿಯಂತೆ ದೇಶದಲ್ಲಿ ೩೬ ದೇವಾಲಯಗಳನ್ನು ಒಡೆದು ಹಾಕಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆ ಎಲ್ಲಾ ದೇಗುಲಗಳನ್ನು ಕಾನೂನು ಮೂಲಕವೇ ವಾಪಸ್ ಪಡೆದುಕೊಳ್ಳುತ್ತೇವೆ. ಎಲ್ಲರಿಗೂ ಅವರವರ ಧಾರ್ಮಿಕ ಭಾವನೆಗಳಿವೆ. ಜ್ಞಾನವಾಪಿ ಮಸೀದಿಯಲ್ಲಿ ನಂದಿ ವಿಗ್ರಹವಿದೆ. ಅದು ಮಸೀದಿ ಕಡೆಗೆ ಮುಖ ಮಾಡಿದೆ. ಹೀಗಾಗಿ ಅದು ದೇವಾಲಯ ಎಂಬುದಕ್ಕೆ ಸಾಕ್ಷಿಯಾಗಿದೆ.
ಇನ್ನು ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೋಮು ಸೌಹಾರ್ದ ಎಂದರೆ ಏನು..? ಕೃಷ್ಣ, ರಾಮ ಮೊದಲಾದ ದೇಗುಲ ಒಡೆದು ಹಾಕುವುದಾ? ಎಂದು ಪ್ರಶ್ನಿಸಿದ್ದಾರೆ.