ಹೈಲೆಟ್ಸ್ :
ಮೈನ್ ಮಿಡ್ಲ್ ಸ್ಕೂಲ್‌ನಲ್ಲಿ ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ
ಪ್ರತಿಮೆ ಅನಾವರಣಗೊಳಿಸಿದ ಮಾಜಿ ಸಚಿವ ಕೆಎಸ್‌ಈ
ವಿಶ್ವೇಶ್ವರಯ್ಯ ಎಲ್ಲಾ ಇಂಜಿನಿಯರ್‌ಗಳಿಗೆ ಮಾದರಿ ವ್ಯಕ್ತಿ
ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗ : ಬಿ.ಹೆಚ್.ರಸ್ತೆಯ ಮೇನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ಭಾರತ ರತ್ನ ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ತಳಿ ಅನಾವರಣಗೊಂಡಿದೆ. ಸರ್‌ಎಂವಿ ಅಭಿಮಾನಿಗಳ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪುತ್ತಳಿ ನಿರ್ಮಿಸಲಾಗಿದ್ದು ಅನಾವರಣ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ತಳಿಯನ್ನು ಅನಾವರಣಗೊಳಿಸದರು. ಈ ವೇಳೆ ಮಾತನಾಡಿದ ಕೆಎಸ್‌ಈ, ವಿಶ್ವೇಶ್ವರಯ್ಯ ಅವರು ರಾಷ್ಟ್ರಭಕ್ತರು, ಎಲ್ಲಾ ಇಂಜಿನಿಯರ್‌ಗಳಿಗೆ ಮಾದರಿಯಾಗಿದ್ದ ವ್ಯಕ್ತಿ. ಅವರು ಡ್ಯಾಂ ನಿರ್ಮಿಸಿದರು, ಕಾರ್ಖಾನೆ ನಿರ್ಮಿಸಿದರು ಎನ್ನುವುದಕ್ಕಿಂತ ರಾಷ್ಟ್ರವನ್ನು ಕಟ್ಟಿದರು ಎನ್ನಬಹುದೆಂದು ಈಶ್ವರಪ್ಪ ಹೇಳಿದರು.