ಗಲಭೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ 

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹರ್ಷ ಅಂತಿಮ ಯಾತ್ರೆ ಸಂಧರ್ಭದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹರ್ಷ ಅಂತಿಮ ಯಾತ್ರೆ ಸಮಯದಲ್ಲಿ ಕೆಲ ದುಷ್ಕರ್ಮಿಗ ಕಂಡ ಕಂಡ ವಾಹನ, ಮನೆಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದರು. ಹಾನಿಗೊಳಗಾದವರನ್ನ ಭೇಟಿ ಮಾಡಿದ ಜಿಲ್ಲಾಧ್ಯಕ್ಷರು ಘಟನೆ ಹೇಗೆ ನಡೆಯಿತು, ಯಾವ್ಯಾವ ವಸ್ತುಗಳಿಗೆ ಹಾನಿಯಾಗಿದೆ ಎಂದು ನೊಂದವರಿಂದ ಮಾಹಿತಿ ಪಡೆದುಕೊಂಡು, ಅವರಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ಹಾಗೂ ಮತ್ತಿತರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷರಿಗೆ ಸಾಥ್ ನೀಡಿದರು.