ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ರಣಮಳೆಗೆ ಕೆಲ ಗ್ರಾಮೀಣ ಭಾಗದ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಇನ್ನು ಸರಿಯಾದ ರಸ್ತೆ ಮಾರ್ಗ ಕೂಡ ಇರದ ಪ್ರದೇಶಗಳಲ್ಲಿ ಮಕ್ಕಳು ಶಾಲೆಗೆ ತೆರಳಲು ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಸೆ ಗ್ರಾಮದ ನೇರಲಿಗೆ ಊರಿನ ಕೆಲ ಮನೆಗಳು ಮಳೆಯಿಂದಾಗಿ ಸಂಪರ್ಕ ಕಡಿತವಾಗಿದೆ. ಶಾಲೆಗೆ ತೆರಳುವ ಮಕ್ಕಳು ಜೀವ ಕೈಯಲ್ಲಿ ಇಟ್ಟಿಕೊಂಡು ಹೋಗಬೇಕಾದ ಸ್ಥಿತಿಯಿದೆ.
ಸ್ವಲ್ಪ ಹೆಚ್ಚು ಕಡಿಮೆ ಆದ್ರೆ ಅನಾಹುತವೇ ಸಂಭವಿಸಬಹುದು. ಹತ್ತಿರದ ಹೋಗಳಿಕಮ್ಮ ಕೆರೆಯ ನೀರಿನಿಂದಾಗಿ ನೆರೆಯ ವಾತಾವರಣ ನಿರ್ಮಾಣವಾಗಿದೆ. ಕೃಷಿ ಭೂಮಿಯು ಜಲಾವೃತವಾಗಿದೆ. ಪ್ರತಿ ಮಳೆಗಾಲದಲ್ಲಿಯೂ ಇಲ್ಲಿ ಇದೇ ಸ್ಥಿತಿ ನಿರ್ಮಾಣವಾಗ್ತಾಯಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಪರಿಹಾರ ನೀಡ್ತಾಯಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಾಯಿದ್ದಾರೆ.