ಶಿವಮೊಗ್ಗ : ಮನೆಯ ಬಾಗಿಲಿನ ಮುಂದೆ ಮರಳಿನ ಚೀಲ ಇಟ್ಟುಕೊಂಡು ಇರೋದನ್ನು ನೀವು ನೋಡಿದ್ದೀರಾ..? ಇಲ್ಲ ಅನ್ನೋದಾದ್ರೆ ಶಿವಮೊಗ್ಗ ನಗರದ ಲಕ್ಷ್ಮೀ ಟಾಕೀಶ್ ಬಳಿಯ ವೆಂಕಟೇಶನಗರದಲ್ಲಿ ಇದು ಕಾಣಸಿಗುತ್ತೆ. ಪಕ್ಕದಲ್ಲೇ ತುಂಗಾ ಕಾಲುವೆ ಇದೆ. ಮಳೆ ಬಂದಾಗ ಕಸ, ಕಡ್ಡಿ ಕಟ್ಟಿಕೊಂಡು ನೀರು ಸೀದಾ ಏರಿಯಾಗೆ ನುಗ್ಗುತ್ತದೆ. ಬಳಿಕ ಮನೆಯ ಒಳಕ್ಕೂ ನುಗ್ಗುತ್ತದೆ. ಮಳೆಗಾಲ ಆರಂಭವಾದ್ರೆ ಸಾಕು ಇಲ್ಲಿರೋ ಜನರ ನೆಮ್ಮದಿಯೇ ಹಾಳಾಗಿ ಹೋಗುತ್ತದೆ.
ನಗರದ ಮಧ್ಯ ಭಾಗದಲ್ಲಿಯೇ ಈ ಕಾಲುವೆ ಹಾದು ಹೋಗಿರೋದ್ರಿಂದ ತ್ಯಾಜ್ಯವೂ ಅದರಲ್ಲಿ ಸೇರಿಕೊಂಡು ಅನಾಹುತಗಳಿಗೆ ಕಾರಣವಾಗಿದೆ. ಈ ಹಿಂದೆಯೂ ಇದೇ ಸಮಸ್ಯೆ ಉದ್ಭವಿಸಿತ್ತು. ಆದರೆ ಕ್ರಮ ಕೈಗೊಳ್ಳಬೇಕಾದ ಪಾಲಿಕೆಯವರು ಇದುವರೆಗೂ ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಪರಿಣಾಮ ಇದೀಗ ಇಲ್ಲಿರೋ ಮನೆಗಳಿಗೆ ನೀರು ನುಗ್ಗಿದೆ. ಸಂಸದ ಬಿ.ವೈ. ರಾಘವೇಂದ್ರ ಭೇಟಿಯ ವೇಳೆ ಜನರು ತಮ್ಮ ಗೋಳನ್ನು ತೋಡಿಕೊಂಡರು.