ಶಿವಮೊಗ್ಗ : ಜೂನ್ 12 ರಂದು ವೀರಶೈವ ಲಿಂಗಾಯತರ ನಡೆ ಅನುಭವ ಮಂಟಪದ ಕಡೆ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಸಮಾವೇಶಕ್ಕೆ ಶಿವಮೊಗ್ಗದಿಂದ ಎರಡು ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ತಾಲೂಕ ಅಧ್ಯಕ್ಷ ಧನ್‌ರಾಜ್ ತಿಳಿಸಿದರು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾವೇಶದಲ್ಲಿ 770 ಮಠಾಧೀಶರು ಭಾಗಿಯಾಗಲಿದ್ದಾರೆ. ಜಿಲ್ಲೆಯಿಂದ ಸಮಾವೇಶಕ್ಕೆ 15 ಬಸ್‌ಗಳು ಹೊರಡಲಿವೆ ಎಂದರು.
ಹಾಗೇನೆ ಈ ವೇಳೆ ಮಾತನಾಡಿದ ವೇದಿಕೆಯ ಕೋಶಾಧ್ಯಕ್ಷ ಜ್ಯೋತಿ ಪ್ರಕಾಶ್, ಸ್ವಾಮೀಜಿಯೊಬ್ಬರು ಇದು ಅನುಭವ ಮಂಟಪ ಅಲ್ಲವೆಂದಿದ್ದಾರೆ. ಆದರೆ ಬಸವಕಲ್ಯಾಣದ ಶಾಸಕರು ಸಿಎಂಗೆ ಈ ಮಸೀದಿಯನ್ನ ವೀರಶೈವ ಸಂಘಟನೆಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಅನೇಕ ಸ್ವಾಮೀಜಿಗಳು ಇಲ್ಲಿ ಅನುಭವ ಮಂಟಪ ಇತ್ತು. ಇದನ್ನ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ ಎಂದರು.