ಅಶೋಕ್ ಪೈ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳು 

ಶಿವಮೊಗ್ಗ : ಖ್ಯಾತ ಮನೋವೈದ್ಯ ದಿವಂಗತ ಡಾ. ಅಶೋಕ್ ಪೈ ಜನ್ಮ ದಿನಾಚರಣೆಯ ಅಂಗವಾಗಿ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ನಡೆಸಲಾಯ್ತು.

ಸ್ಪರ್ಧೆಗೆ ಜಿಲ್ಲೆಯ ೧೧ ಪದವಿ ಪೂರ್ವ ಕಾಲೇಜುಗಳ ೩೩ ವಿದ್ಯಾಥಿಗಳು ಭಾಗವಹಿಸಿದ್ದರು. ಕಟೀಲು ಅಶೋಕ್ ಪೈ ಕಾಲೇಜಿನ ಸೈನ್ಸ್ ವಿಭಾಗದಿಂದ ಸೈನ್ಸ್ ಕ್ಲಬ್ ಕೂಡ ಈ ವೇಳೆ ಉದ್ಘಾಟಿಸಲಾಯ್ತು. ದೇಶೀಯ ವಿದ್ಯಾ ಶಾಲೆಯ ನಿವೃತ್ತ ಪ್ರಾಂಶುಪಾಲ ಪ್ರೊ.ಶಂಕರ ನಾರಾಯಣ ಶಾಸ್ತ್ರಿ ಈ ಕ್ಲಬ್‌ನ ಉದ್ಘಾಟನೆಯನ್ನ ನೆರವೇರಿಸಿಕೊಟ್ಟರು.