ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು 

ಶಿವಮೊಗ್ಗ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.

18 ವರ್ಷ ಮೇಲ್ಪಟ್ಟವರಿಗೆ ಹಾಫ್ ಮ್ಯಾರಾಥಾನ್, 17 ವರ್ಷದೊಳಗಿನವರಿಗೆ ಮಿನಿ ಮ್ಯಾರಾಥಾನ್, 30 ವರ್ಷ ಮೇಲ್ಪಟ್ಟವರಿಗೆ 200 ಹಾಗೂ 400 ಮೀಟರ್ ರನ್ನಿಂಗ್ ರೇಸ್, ಉದ್ದ ಜಿಗಿತ, ಗುಂಡು ಎಸೆತ, 25ವರ್ಷ ಮೇಲ್ಪಟ್ಟವರಿಗೆ ಥ್ರೋಬಾಲ್ ಸ್ಪರ್ಧೆ ಸೇರಿದಂತೆ ವಯಸ್ಸಿನ ಯಾವುದೇ ಮಿತಿಯಿಲ್ಲದೆ ಸಾಂಪ್ರದಾಯಿಕ ಅಡುಗೆ, ರಂಗಗೀತೆ, ಜನಪದ ಗೀತೆ, ಗೀಗಿಪದ ಹೀಗೆ ಹಲವು ಸ್ಪರ್ಧೆಗಳು ನಡೆದವು, ಮಹಿಳೆಯರೂ ಕೂಡ ಬಹಳ ಆಸಕ್ತಿಯಿಂದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸದ್ದರು.