ಶಿವಮೊಗ್ಗ : ಶುಕ್ರವಾರ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಪ್ಯಾಕೇಜ್ ಘೋಷಣೆ ಮಾಡ್ತಾಯಿದ್ದ ಹಾಗೆ ಶನಿವಾರ ವಾಟ್ಸಪ್ ಮೂಲಕ ಅಶ್ಲೀಲ ಮೆಸೇಜ್‌ಗಳನ್ನ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ಮಾಡ್ತಾಯಿದ್ದಾರೆ. ಇಂತಹ ಉಪನ್ಯಾಸಕರನ್ನ ನೇಮಕ ಮಾಡಿ ಮುಂದಿನ ಪೀಳಿಗೆಯನ್ನು ಇಂತವರ ಕೈಯಲ್ಲಿ ಕೊಡಬೇಕಾ ಎಂದು ಮಂತ್ರಿಗಳು ನನಗೆ ಪ್ರಶ್ನಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅತಿಥಿ ಉಪನ್ಯಾಸಕರಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಮ್ಮ ಸ್ವೌಲಭ್ಯಗಳನ್ನ ಕೇಳುವ ಹಕ್ಕು ನಿಮಗಿದೆ. ಆದ್ರೆ ಸ್ಟಾಂಡರ್‍ಡ್‌ಗಿಂತ ಕೆಳಮಟ್ಟಕ್ಕೆ ದಯವಿಟ್ಟು ಇಳಿಯಬೇಡಿ. ಸಮಾಜ ನಿಮ್ಮ ಮೇಲೆ ಸಹಾನುಭೂತಿ ಕಳೆದುಕೊಳ್ಳುತ್ತದೆ. ನಿಮ್ಮ ಈ ವರ್ತನೆಯಿಂದಾಗಿಯೇ ಯಾವುದೇ ಶಾಸಕರು ನಿಮ್ಮ ಪರವಾಗಿ ಮಾತನಾಡಿಲ್ಲ. ನಿಮ್ಮ ವರ್ತನೆ ನಿಮ್ಮ ಹೋರಾಟವನ್ನು ಹಾಳು ಮಾಡ್ತಿದೆ ಎಂದು ಆಯನೂರು ಮಂಜುನಾಥ್ ಅತಿಥಿ ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.