ಶಿವಮೊಗ್ಗ : ಸದಾ ವಿವಾದಗಳಿಂದಲೇ ಸುದ್ದಿಯಾಗೋದು ಮೆಗ್ಗಾನ್ ಆಸ್ಪತ್ರೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.ಮೆಗ್ಗಾನ್ ಹೆರಿಗೆ ವಾರ್ಡ್ ಶರಾವತಿ ವಿಭಾಗದಲ್ಲಿ ಗಂಡು ಮಗು ಹುಟ್ಟಿದರೆ ೨ ಸಾವಿರ ರೂ., ಹೆಣ್ಣು ಮಗು ಹುಟ್ಟಿದರೆ ೧೫೦೦ ರೂ ಲಂಚ ಕೇಳ್ತಾರೆ ಅನ್ನೋ ಆರೋಪವಿತ್ತು.
ಇದೀಗ ಈ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಬ್ಬರು ಹೊರಗುತ್ತಿಗೆ ನರ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಭದ್ರಾವತಿಯ ನಜ್ಮಾ ಎಂಬುವರಿಗೆ ಈ ದಿನ ಬೆಳಿಗ್ಗೆ ಹೆರಿಗೆ ಆಗಿತ್ತು. ಆಗ ನರ್ಸ್‌ಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ನಮ್ಮ ಬಳಿ ಇರೋದೇ ೬೦೦ ರೂಪಾಯಿ ಎಂದಾಗ ನರ್ಸ್‌ಗಳು ಅದನ್ನು ಸ್ವೀಕರಿಸಿಲ್ಲ. ೧೫೦೦ ರೂಪಾಯಿಗಿಂತ ಕಡಿಮೆ ಹಣ ತೆಗೆದುಕೊಳ್ಳೋದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಳಿಕ ಕುಟುಂಬದ ಸದಸ್ಯರು ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧೀಕ್ಷಕರು, ಚಂದ್ರಮ್ಮ ಮತ್ತು ಇಂದ್ರಮ್ಮ ಎಂಬ ಇಬ್ಬರು ನರ್ಸ್ ಅಮಾನತು ಮಾಡಿರೋದಾಗಿ ತಿಳಿಸಿದ್ದಾರೆ.