ಶಿವಮೊಗ್ಗ : ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಬಡ ಮತ್ತು ಮಧ್ಯಮ ವರ್ಗದವರ ಬದುಕು ದುಸ್ಥರವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಾ ಸಾಗಿದ್ದು ಜನರು ನಿತ್ಯ ಜೀವನ ನಡೆಸೋದೇ ಕಷ್ಟವಾಗಿ ಪರಿಣಮಿಸಿದೆ.
ನಿಮಗೆ ನೆನಪಿರಬೇಕು.. ಒಂದು ಕಾಲದಲ್ಲಿ ಟೊಮೆಟೋಗೆ ಬೆಂಬಲ ಬೆಲೆ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಬೀದಿಗೆ ಬಿಸಾಡಿ, ಹೋರಾಟಗಳನ್ನು ನಡೆಸ್ತಾ ಇದ್ರು. ಕಳೆದ ಒಂದೂವರೆ ತಿಂಗಳಿನಿಂದ ಟೊಮೆಟೋ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಕೆಜಿಗೆ 40 ರೂಪಾಯಿ, ಬಳಿಕ 60 ರೂಪಾಯಿ, ಆಮೇಲೆ 80 ರೂಪಾಯಿ.. ಹೀಗೆ ಏರಿಕೆಯಾಗುತ್ತಲೇ ಸಾಗುತ್ತಿರೋದು ಗೃಹಿಣಿಯರು ಅಡುಗೆಗೆ ಟೊಮೆಟೋ ಬಳಕೆ ಮಾಡಬೇಕಾ.. ಬೇಡ್ವಾ ಅನ್ನೋ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾವಾಗಿರೋದಂತೂ ಸುಳ್ಳಲ್ಲ. ಕೆಲವರು ಮಾತ್ರ ಒಂದು ಕೆಜಿ ಟೊಮೆಟೋ ಖರೀದಿ ಮಾಡಿದ್ರೆ ಒಂದು ವಾರದ ವರೆಗೂ ಯೂಸ್ ಮಾಡಿಕೊಳ್ತಾ ಇದಾರೆ. ಇನ್ನು ಕೆಲವು ಹುಣಸೇಹಣ್ಣಿನ ಮೊರೆ ಹೋಗಿದ್ದಾರೆ.