ಸ್ಮಾಟ್‌ಸಿಟಿ ಕಚೇರಿಯ ಎದುರೇ ಈ ಹಣೆಬರಹ 

ಹೈಲೆಟ್ಸ್ : 

ಸ್ಮಾಟ್‌ಸಿಟಿ ಕಚೇರಿಯ ಎದುರೇ ಈ ಹಣೆಬರಹ 
ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ 
ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು 

ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ಸೇರಿದೆ ಗೊತ್ತು. ಅದ್ಯಾವಾಗ ಸ್ಮಾರ್ಟ್ ಆಗುತ್ತೋ ಏನೋ ಗೊತ್ತಿಲ್ಲ. ಆದ್ರೆ, ಸ್ಮಾರ್ಟ್‌ಸಿಟಿ ಕಚೇರಿಯ ಬಳಿಯೇ ಕ್ಲೀನ್ ಇಲ್ಲ ಅಂದ್ರೆ ಹೇಗೆ..?

ಹೌದು, ಶಿವಮೊಗ್ಗ ನಗರದ ನೆಹರೂ ರಸ್ತೆಯಲ್ಲಿರುವ ಸ್ಮಾಟ್ ಸಿಟಿ ಕಚೇರಿಯ ಎದುರೇ ಚರಂಡಿಯಿಂದ ನೀರು ಹರಿದು ರಸ್ತೆಯ ಮೇಲೆ ನಿಂತಿದೆ. ಸ್ಮಾಟ್ ಸಿಟಿಯ ಕಚೇರಿ ಹಾಗೂ ಎಂಎಲ್‌ಎ ಕಚೇರಿಯ ಹಿಂಬದಿಯ ಪೈಪಿನಿಂದ ಹೊರ ಬರುತ್ತಿರುವ ನೀರು ಚರಂಡಿ ಮೂಲಕ ರಸ್ತೆ ಸೇರುತ್ತಿದೆ.

ನೆಹರೂ ರಸ್ತೆ ಅಂದ್ರೆ ಸಾವಿರಾರು ಜನರು ನಿತ್ಯ ಸಂಚರಿಸ್ತಾರೆ ಅಂತ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಕಪಕ್ಕದಲ್ಲಿರುವ ಅಂಗಡಿಯವರಿಗೆ, ರಸ್ತೆಯಲ್ಲಿ ಓಡಾಡುವವರಿಗೆ ಇದರಿಂದ ತೊಂದರೆಯಾಗುತ್ತಿದೆ.

ಶಿವಮೊಗ್ಗ ನಗರವನ್ನು ಸ್ಮಾರ್ಟ್ ಮಾಡುವ ಮೊದಲು ತಮ್ಮ ಕಚೇರಿ ಸುತ್ತಮುತ್ತ ಕ್ಲೀನ್ ಇಟ್ಟುಕೊಳ್ಳಲಿ ಅಂತ ಸಾರ್ವಜನಿಕರು ಹೇಳ್ತಾ ಇದಾರೆ.