ನಿಮ್ಮಿಂದ ರಾಷ್ಟ್ರೀಯತೆ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ : ಬಿವೈಆರ್ 

ಶಿವಮೊಗ್ಗ : ಶಾಂತಿಗೆ ಭಂಗ ತರುವವರಿಗೆ ಶಬ್ಬಾಸ್‌ಗಿರಿ ಕೊಡಲಾಗುತ್ತಿದೆ. ಹಿಜಾಬ್ ಸಂಘರ್ಷದ ಬೇರು ಬಹಳ ಆಳವಾಗಿ ವ್ಯಾಪಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಜಾಬ್ ವಿಚಾರದಿಂದಾಗಿ ಈಡೀ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರು ರಾಷ್ಟ್ರಧ್ವಜವನ್ನ ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಇದನ್ನೇ ಮುಂದಿಕೊಟ್ಟುಕೊಂಡು ಸದನದಲ್ಲಿ ನಡೆಯಬೇಕಿದ್ದ ಚರ್ಚೆಯ ಸಮಯವನ್ನು ವಿರೋಧ ಪಕ್ಷದವರು ಹಾಳು ಮಾಡ್ತಾಯಿದ್ದಾರೆ. ನಿಮ್ಮಿಂದ ಈಶ್ವರಪ್ಪ, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರಾಷ್ಟ್ರೀಯತೆಯ ಕುರಿತಾಗಿ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ. ಹಿಜಾಬ್ ಪ್ರಕರಣದ ತೀರ್ಪು ಬರುವ ಮೊದಲೇ ನೀವು ಮಕ್ಕಳ ಮನಸ್ಸನ್ನ ಹಾಳು ಮಾಡುವ ಪ್ರವೃತ್ತಿಯನ್ನು ಕೈಬಿಡಬೇಕೆಂದು ವಿನಂತಿಸಿದರು.