ಶಿವಮೊಗ್ಗ : ಪಯಣ, ರಕ್ಷ ಸಮುದಾಯ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರದ ಸಹಯೋಗದಲ್ಲಿ ಟ್ರೂಥ್ ಡ್ರೀಮ್ ಫೋಟೋ ಪ್ರದರ್ಶನ ನಡೆಯಲಿದೆ ಎಂದು ರಕ್ಷ ಸಮುದಾಯ ಸಂಘದ ಚಾಂದಿನಿ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರಾನ್ಸ್‌ವುಮೆನ್, ಟ್ರಾನ್‌ಮೆನ್ ಹಾಗೂ ಜಂಡರ್ ನಾನ್ ಕನ್ಪಾರ್ಮಿಂಗ್ ವ್ಯಕಿಗಳೆಂದು ಗುರುತಿಸಿಕೊಳ್ಳುವ ೧೨ ಜನ ಸ್ನೇಹಿತರು ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಇವರೆಲ್ಲರೂ ೫೦ ವರ್ಷ ಮೇಲ್ಪಟ್ಟವರಾಗಿದ್ದು, ತಮ್ಮ ಅಂತರಾಳದ ಸೌಂದರ್ಯ ಹಾಗೂ ಭಾವನೆಗಳನ್ನು ಛಾಯಾ ಚಿತ್ರದ ಮೂಲಕ ಪ್ರದರ್ಶನ ಮಾಡಲಿದ್ದಾರೆ. ಜೂನ್ ೩೦ರಂದು ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಟ್ರೂಥ್ ಡ್ರೀಮ್ ಫೋಟೋ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.