ಹೈಲೆಟ್ಸ್ :
ರಾಜ್ಯಕ್ಕೆ ಸದ್ಯಕ್ಕಿಲ್ಲ ಮಳೆಯಿಂದ ಮುಕ್ತಿ
ಮುಂಗಾರು ಮಾರುತ ಮುಗಿದರು ಮಳೆ ಮುಂದುವರಿಕೆ
ಹಿಂಗಾರಿನಲ್ಲಿಯೂ ವಾಡಿಕೆಗಿಂದ ಹೆಚ್ಚಿನ ಮಳೆ ಸಾಧ್ಯತೆ
ಹವಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ ಮಳೆ ನಿಲ್ಲುವ ಲಕ್ಷಣಗಳು ಕಾಣಿಸ್ತಾಯಿಲ್ಲ. ಯಾಕೆಂದರೆ, ನೈರುತ್ಯ ಮುಂಗಾರು ಸೆಪ್ಟಂಬರ್ ೧೭ರಂದು ಕೊನೆಗೊಳ್ಳಲಿದೆಯಾದರೂ ರಾಜ್ಯದಲ್ಲಿ ತಕ್ಷಣಕ್ಕೆ ಮಳೆ ತಗ್ಗುವ ಸಾಧ್ಯತೆಯಿಲ್ಲವೆಂದು ಹವಮಾನ ಇಲಾಖೆ ತಿಳಿಸಿದೆ.
ಇನ್ನೆರಡು ದಿನಗಳಲ್ಲಿ ಮುಂಗಾರು ಮಾರುತ ರಾಜಸ್ಥಾನದ ಮೂಲಕ ಕೊನೆಯ ಚರಣ ಮುಗಿಸಲಿದೆ. ಬಳಿಕ ೧೫ ರಿಂದ ೨೦ ದಿನಗಳ ಕಾಲ ಕರ್ನಾಟಕದ ಮೇಲೆ ಪರಿಣಾಮ ಬೀರಲಿದ್ದು ಈ ಅವಧಿಯಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದರ ಬೆನ್ನೆಲ್ಲೇ ಹಿಂಗಾರು ಆರಂಭವಾಗಲಿದ್ದು, ಅದು ಕೂಡ ವಾಡಿಕೆಗಿಂತ ಹೆಚ್ಚು ಮಳೆ ತರುವ ಸಾಧ್ಯತೆಯಿದೆ.