ರಿಪ್ಪನ್‌ಪೇಟೆ ಸಮೀಪ ಶುರುವಾಯ್ತು ಚಿರತೆ ಕಾಟ

ಹೈಲೆಟ್ಸ್:

ರಿಪ್ಪನ್‌ಪೇಟೆ ಸಮೀಪ ಶುರುವಾಯ್ತು ಚಿರತೆ ಕಾಟ

ಹಸುವೊಂದರ ಮೇಲೆ ದಾಳಿ ನಡೆಸಿದ ಚಿರತೆ

ಚಿರತೆ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು

ಘಟನೆ ಸಂಬಂಧ ಮಾಹಿತಿ ಪಡೆದಿರುವ ಹರತಾಳು ಹಾಲಪ್ಪ

ಹಸು ಕಳೆದುಕೊಂಡ ರೈತನಿಗೆ ಪರಿಹಾರ ನೀಡುವಂತೆ ಸೂಚನೆ

ಶಿವಮೊಗ್ಗ:
ರಿಪ್ಪನ್‌ಪೇಟೆ ಸಮೀಪ ತಡರಾತ್ರಿ ಚಿರತೆ ಕಾಟ ಆರಂಭವಾಗಿದೆ. ಹಸುವೊಂದರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಮೀಪದ ಮಳವಳ್ಳಿ ಗ್ರಾಮದ ಸಂಪರ್ಕ ರಸ್ತೆಯ ಬದಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಎಳೆದು ಸುಮಾರು ನೂರು ಅಡಿಯಷ್ಟು ದೂರದಲ್ಲಿ ಎಳೆದು ಹಾಕಿ ಹೋಗಿರುವಂತಹ ಹೃದಯಾ ವಿದ್ರಾವಕ ಘಟನೆ ನಡೆದಿದೆ. ಮಳವಳ್ಳಿ ಗ್ರಾಮದ ರೈತ ವಿಶ್ವನಾಥ್ ರವರಿಗೆ ಸೇರಿದ ಹಸು ಚಿರತೆ ದಾಳಿಯಿಂದ ಸಾವನಪ್ಪಿದ್ದು, ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಮಳವಳ್ಳಿ ಸಂಪರ್ಕ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು, ಮಹಿಳೆಯರು ವಯೋವೃದ್ದರು ಓಡಾಡುತಿದ್ದು ಈ ಚಿರತೆ ದಾಳಿಯಿಂದ ಆತಂಕಕ್ಕೆ ಓಳಗಾಗಿದ್ದಾರೆ. ಈ ಕುರಿತು ಮಾಹಿತಿ ಪಡೆದುಕೊಂಡಿರು ಶಾಸಕ ಹರತಾಳು ಹಾಲಪ್ಪ ತಕ್ಷಣ ಸಂಬಂಧ ಪಟ್ಟ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಚಿರತೆ ದಾಳಿಯಿಂದ ಹಸುವನ್ನು ಕಳೆದುಕೊಂಡ ಬಡ ರೈತನಿಗೆ ಪರಿಹಾರ ನೀಡುವಂತೆ ಸೂಚಿಸಿದರು.