ಶಿವಮೊಗ್ಗ : ಬಿಜೆಪಿ ಸಂಸ್ಥಾಪನ ದಿವಸ್ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ ಹಾಗೂ ಫಲಾನುಭವಿಗಳ ಭೇಟಿಗೆ ಪಕ್ಷ ಮುಂದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾನಗರದ ಭಾರತೀಯ ವಿದ್ಯಾಭವನದಲ್ಲಿ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕಾ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ದೃಡ ನಿರ್ಧಾರದಿಂದ ನಮ್ಮ ದೇಶವು ಕೋವಿಡ್ ಮಹಾಮಾರಿಯನ್ನು ಮೆಟ್ಟಿ ನಿಂತಿದೆ. ಭಾರತೀಯ ಬಯೋ ಟೆಕ್ ಸಂಸ್ಥೆಯಿಂದ ಲಸಿಕೆಯನ್ನು ಸಂಶೋಧಿಸಿ ಉಚಿತ ಲಸಿಕಾ ಅಭಿಯಾನದ ಮೂಲಕ ಭಾರತೀಯರ ಆರೋಗ್ಯವನ್ನು ಪ್ರಧಾನಿ ರಕ್ಷಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಮತ್ತಿರರು ಹಾಜರಿದ್ದರು.