ರೈತನ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕು 

ಬೆಂಗಳೂರು : ರೈತನ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ. 100ರಲ್ಲಿ 90 ಭಾಗದಷ್ಟು ಸ್ವಾಮಿನಾಥನ್ ವರಿದಿಯನ್ನು ಜಾರಿಗೆ ತಂದಿದ್ದೇವೆ. ಅದರಲ್ಲೆ ಯಾವುದಾದರು ಕೊರತೆ ಇದ್ದರೆ ಹೇಳಿ ಅದನ್ನು ಸರಿಪಡಿಸೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನದಲ್ಲಿ ಹೇಳಿದ್ದಾರೆ. 
ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ರೈತನ ಸಮಸ್ಯೆ ಕುರಿತು ಮಾತನಾಡಿದ ಅವರು, ರೈತ ಬೆಳೆದ ಬೆಳೆಗೆ ಸಕಾಲಕ್ಕೆ ಬೆಂಬಲ ಬೆಲೆ ಸಿಗ್ತಾಯಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ತೆನೆ. ರೈತನ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕು. ರೈತ ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವವರೆಗೆ ಅದನ್ನು ಸಂಗ್ರಹಿಸಿ ಇಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಹಲವು ಸೌಲಭ್ಯಗಳನ್ನು ರೈತ ಸದುಪಯೋಗ ಮಾಡಿಕೊಳ್ಳಬೇಕು ಎಂಬು ಬಿಎಸ್‌ವೈ ಹೇಳಿದ್ರು.