ರಾಜಸ್ಥಾನಿ ಸರಗಳ್ಳರ ಬಂಧನ 

ಶಿವಮೊಗ್ಗ : ರಾಜ್ಯಸ್ಥಾನ ಮೂಲದ ಇಬ್ಬರು ಸರಗಳ್ಳರನ್ನು ಶಿವಮೊಗ್ಗದ ಪೊಲೀಸರು ಬಲೆ ಬೀಳಿಸಿಕೊಂಡಿದ್ದಾರೆ. ಮೇ 23 ರಂದು ಸಂಜೆ ಶೇಷಾದ್ರಿಪುರಂನಲ್ಲಿ ಅಪರಿಚಿತ ವ್ಯಕ್ತಿಗಳು ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶೋಕ್ ಕುಮಾರ್, ವಿಕಾಸ್ ಕುಮಾರ್ ಎಂಬುವ ರಾಜಸ್ಥಾನಿ ಸರಗಳ್ಳರನ್ನು ಕೋಟೆ ಪೊಲೀಸರು ಬಲೆಗೆ ಬೀಳಿಸಿಕೊಂಡಿದ್ದಾರೆ. ವಿನೋಬನಗರ, ದೊಡ್ಡಪೇಟೆ, ತುಂಗಾ ನಗರ ಠಾಣೆಯಲ್ಲಿ ಈ ಕಳ್ಳರ ವಿರುದ್ಧ ಬರೋಬ್ಬರಿ 6 ಪ್ರಕರಣಗಳು ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2 ದ್ವಿಚಕ್ರ ವಾಹನ, 225 ಗ್ರಾಮ್ ತೂಕದ ಬಂಗಾರದ ಆಭರಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ