ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 7ನೇ ವಾರ್ಷಿಕ ಸಮ್ಮೇಳನ 

ಶಿವಮೊಗ್ಗ : ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 7ನೇ ವಾರ್ಷಿಕ ಸಮ್ಮೇಳನ ಏಪ್ರಿಲ್ 8 ಹಾಗೂ 9ರಂದು ನಡೆಯಲಿದೆ.  ಹಾಗೆಯೇ, ಏಪ್ರಿಲ್ 10ರಂದು ಭಗವಾನ್ ಶ್ರೀ ರಾಮಕೃಷ್ಣ ಭಾವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಾರ್ಷಿಕ ಸಮ್ಮೇಳನದಲ್ಲಿ ದೇಶದೆಲ್ಲೆಡೆಯಿಂದ ಸುಮಾರು 75 ಯತಿಗಳು, ಮಾತಾಜಿಗಳು, ಚಿಂತಕರು ಆಗಮಿಸುತ್ತಿದ್ದಾರೆ ಹಾಗೂ ಕರ್ನಾಟಕದ ಹಲವು ಮಠಾಧೀಶರು ಕೂಡ ಭಾಗವಹಿಸಲಿದ್ದಾರೆ. ಸಮ್ಮೇಳನವು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.