ಹೈಲೆಟ್ಸ್ :
ಜಿಲ್ಲಾ ಪದವೀಧರರ ಸಹಕಾರ ಸಂಘ
ಪ್ರಸಕ್ತ ಸಾಲಿನಲ್ಲಿ 173.6 ಕೋಟಿ ವ್ಯವಹಾರ
1.1 ಕೋಟಿ ರೂಪಾಯಿ ನಿವ್ವಳ ಲಾಭ
ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಮಾಹಿತಿ
ಶಿವಮೊಗ್ಗ : ಜಿಲ್ಲಾ ಪದವೀಧರರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೧೭೩.೬ ಕೋಟಿ ವ್ಯವಹಾರ ನಡೆಸಿದೆ. ಈ ಮೂಲಕ ೧.೧ ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ವಿವರಣೆ ನೀಡಿದ ಅವರು, ಸಂಘದಲ್ಲಿ ೬೫೦೦ಕ್ಕೂ ಹೆಚ್ಚು ಸದಸ್ಯರಿದ್ದು, ೩.೩೬ ಕೋಟಿ ರೂಪಾಯಿ ನಿವ್ವಳ ಷೇರು ಬಂಡವಾಳ ಹೊಂದಿದೆ. ಆಪದ್ಧನ ನಿಧಿಯಲ್ಲಿ ೨.೪೪ ಕೋಟಿ, ಕಟ್ಟಡ ನಿಧಿಯಲ್ಲಿ ೪.೪೦ ಕೋಟಿ, ಇತರೆ ನಿಧಿಗಳಲ್ಲಿ ೧.೯೪ ಕೋಟಿ ರೂಪಾಯಿಯಿದೆ. ಹಾಗೇನೆ ಸದಸ್ಯರಿಂದ ೬೧.೭೯ ಕೋಟಿ ರೂ ಠೇವಣಿ ಸಂಗ್ರಹಿಸಿದ್ದು, ೪೭.೮೫ ಕೋಟಿ ರೂ. ಸಾಲ ನೀಡಲಾಗಿದೆ. ಸಾಲ ವಸೂಲಾತಿಯೂ ಶೇ. ೧.೧೦ರಷ್ಟಿದೆ ಎಂದು ಮಾಹಿತಿ ನೀಡಿದರು. ಇನ್ನು ಇದೇ ವೇಳೆ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಕುರಿತಯ ಮಾಹಿತಿ ಹಂಚಿಕೊಂಡರು.