ಶಿವಮೊಗ್ಗ : ಡಾ. ಬೆಳವಾಡಿ ಮಂಜುನಾಥ್ ಅವರು ಸಂಪಾದಿಸಿರುವ ಚಿಂನೆರೆ ಪ್ರೊ. ಕೆ.ಓಂಕಾರಪ್ಪ ಬಾಳಹಾದಿ-ಇಟ್ಟ ಹೆಜ್ಜೆ ಕೃತಿ ಬಿಡುಗಡೆಯಾಗಿದೆ. ಶ್ರೀ ಶಿವಕುಮಾರ್ ಪ್ರಕಾಶನ ಗೆಳೆಯರ ಬಳಗದ ಸಹಯೋಗದಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ಮಂಜುನಾಥ್ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎಸ್.ನಾಗಭೂಷಣ ಅವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ವಹಿಸಿಕೊಂಡಿದ್ದರು. ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಕೃತಿಯನ್ನ ಬಿಡುಗಡೆ ಮಾಡಿದರು.