ಶಿವಮೊಗ್ಗ : ಹಾವು ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ಕಚ್ಚಿಸಿಕೊಂಡ ಘಟನೆ ಕೆಳಗಿನ ತುಂಗಾನಗರದ ಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ನಡೆದಿದೆ. ಲಕ್ಷ್ಮಮ್ಮ ಮನೆಯ ರೂಂ ಒಂದರಲ್ಲಿ ತೋಳದ ಹಾವು ಕಾಣಿಸಿಕೊಂಡಿದೆ. ಆ ಹಾವನ್ನ ಹಿಡಿಯಲು ವ್ಯಕ್ತಿಯೊಬ್ಬ ಮುಂದಾಗಿ, ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದನು,
ನಂತರ ಮನೆಯವರು ಉರಗ ತಜ್ಞ ಸ್ನೇಕ್ ಕಿರಣ್‌ಗೆ ಕರೆ ಮಾಡ್ತಾರೆ. ಸ್ಥಳಕ್ಕೆ ಬಂದ ಕಿರಣ್ ಹಾವನ್ನ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆ ಬಳಿಕವೇ ಇದು ವಿಷಕಾರಿ ಹಾವಲ್ಲ ಅನ್ನೋದು ಮನೆಯವರಿಗೆ ತಿಳಿದಿದೆ.