ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕಮ್ಯುನಿಕೇಷನ್ ಅಂಡ್ ಮೀಡಿಯಾ ಸ್ಕಿಲ್ ಎಂಬ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಿದ ಕನ್ನಡ ಮೀಡಿಯಂ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಾದ ಹೊನ್ನಾಳಿ ಚಂದ್ರುಶೇಖರ್, ಪತ್ರಕರ್ತರಾದವರು ಮುಖ್ಯವಾಗಿ ಪ್ರಶ್ನೆ ಕೇಳಬೇಕು. ಹೀಗಾಗಿ ಈ ಕಾರ್ಯಾಗಾರದಲ್ಲಿ ನೀವು ಸಾಕಷ್ಟು ಪ್ರಶ್ನೆಗಳನ್ನ ಕೇಳಬೇಕು. ಅದೇ ರೀತಿಯಾಗಿ ಪತ್ರಕರ್ತನಾದವನು ಕೇಳಿಸಿಕೊಳ್ಳುವ ಗುಣವನ್ನೂ ಕೂಡ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.