ಶಿವಮೊಗ್ಗ : ಇಲ್ಲಿನ ಕುವೆಂಪು ನಗರ ಬಡಾವಣೆಗೆ ಹೊಂದಿಕೊಂಡಂತಿರುವ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ ಕೆಲವರು ಗುಡಿಸಿಲುಗಳನ್ನ ನಿರ್ಮಿಸಿಕೊಂಡಿದ್ದಾರೆ.
ಇಲ್ಲಿನ ಸರ್ವೇ ನಂಬರ್ 91 ಮತ್ತು 92 ರಲ್ಲಿ ಕೆಲವರು ಶೆಡ್ ಹಾಕಿಕೊಂಡಿದ್ದರೆ ಎಂಬ ಮಾಹಿತಿ ಮೇರಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಸ್ಥಳ ಪರೀಶಲನೆ ಮಾಡಿದ್ದಾರೆ. ಈ ವೇಳೆ ಕೆಲವರು ಆ ಜಾಗದಲ್ಲಿ ಗುಡುಸಿಲುಗಳನ್ನ ನಿರ್ಮಿಸಿಕೊಂಡಿರುವುದು ಕಂಡುಬಂದಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.