ಶಿವಮೊಗ್ಗ : ಸುಮ್ಮೆನೆ ನಿಲ್ಲಿಸಿದ್ದ ಸ್ಕಾರ್‍ಪಿಯೋ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಕರ್ನಾಟಕ ಸಂಘದ ಬಳಿ ನಡೆದಿದೆ. ಈ ಕೂಡಲೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಕಾರ್ ಬಾನೆಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ ನಿಧಾನವಾಗಿ ವ್ಯಾಪಿಸುತ್ತಿತ್ತು. ಅಗ್ನಿಶಾಮಕ ದಳದವರು ಬರುವುದು ತಡವಾಗಿದ್ದರೆ ಬೆಂಕಿ ಇಡೀ ಕಾರಿಗೆ ವ್ಯಾಪಿಸುವ ಸಾಧ್ಯತೆಯಿತ್ತು. ಆದರೆ ಬೆಂಕಿಯನ್ನು ಕೂಡಲೆ ನಂದಿಸಲಾಗಿದೆ. ಹೀಗಾಗಿ ಬೆಂಕಿಯಿಂದ ಕಾರಿಗೂ ಅಷ್ಟೇನು ಹಾನಿಯಾಗಿಲ್ಲ.