ಶಿಕಾರಿಪುರ : ಇಲ್ಲಿನ ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ನಡೆಸುತ್ತಿದ್ದ ಧರಣಿ ಸತ್ಯಗ್ರಹ ಅಂತ್ಯವಾಗಿದೆ. ರೈತಾಭಿಮಾನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಕಾರಿಪುರಕ್ಕೆ ಆಗಮಿಸಿದ್ದರು. ಆದ್ದರಿಂದ ಇಲ್ಲಿನ ಮಾರಿಕಾಂಬ ಬಯಲು ರಂಗಮಂದಿರದ ಕಾಂಪೌಂಡ್ ಮತ್ತು ಬಿ.ಎಸ್.ಎನ್.ಎಲ್ ಕಾಂಪೌಂಡ್ ಬಳಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಎರಡಿ ದಿನ ವ್ಯಾಪಾರ ಮಾಡದಂತೆ ಪುರಸಭೆಯಿಂದ ಸೂಚಿಸಲಾಗಿತ್ತು.
ಅದರಂತೆ ವ್ಯಾಪಾರಗಳು ಕೂಡ ಮಾರ್ಚ್ ೪ ಹಾಗೂ ೫ ರಂದು ವ್ಯಾಪಾರ ಬಂದ್ ಮಾಡಿದ್ದರು. ಆದರೆ, ಮಾರ್ಚ್ ೫ರ ಸಂಜೆ ವ್ಯಾಪಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅವರ ಸ್ಥಳಗಳನ್ನು ಜೆಸಿಬಿಯಿಂದ ದ್ವಂಸಗೊಳಿಸಿದ್ದರು. ಇದನ್ನು ಖಂಡಿಸಿ ವ್ಯಾಪಾರಿಗಳು ಧರಿಣಿ ಕೂತಿದ್ದರು. ಕೊನೆಗೂ ಶಿಕಾರಿಪುರ ತಾಸಿಲ್ದಾರ್ ಮಾ ಕವಿರಾಜ್ ಸ್ಥಳಕ್ಕೆ ಭೇಟಿ ನೀಡಿ, ಇದರ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಸುವೆ ಎಂದು ತಿಳಿಸಿದ್ದಾರೆ. ಸಂಸದರು ಕೂಡ ಪರ್ಯಾಯ ವ್ಯವಸ್ಥೆ ಕಲ್ಪಿಸುವರೆಗೂ, ನೀವೂ ಎಂದಿನಂತೆ ಇಲ್ಲೇ ವ್ಯಾಪಾರ ಮಾಡಿ, ಅಧಿಕಾರಿಯಿಂದಾದ ನಿಮ್ಮ ನಷ್ಟದ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳು ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.