ಶಿವಮೊಗ್ಗ : ಬಟ್ಟೆಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನ ೫ ಪರ್ಸೆಂಟ್‌ನಿಂದ ೧೨ ಪರ್ಸೆಂಟ್‌ಗೆ ಏರಿಕೆ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನ ಖಂಡಿಸಿ ಶಿವಮೊಗ್ಗ ಜವಳಿ ವರ್ತಕರು ಜವಳಿ ಅಂಗಡಿಗಳನ್ನ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತದ ಮಾರ್ಗವಾಗಿ ಪ್ರತಿಭಟನಾ ಮೆರಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಜನವರಿ ೧ ರಿಂದ ಬಟ್ಟೆ ಮೇಲಿನ ತೆರಿಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ ಕರೋನ ಲಾಕ್‌ಡೌನ್‌ನಿಂದಾಗಿ ಜವಳಿ ವ್ಯಾಪಾರಿಗಳು ಸರಿಯಾದ ವ್ಯಾಪಾರವಿಲ್ಲದೆ ನಷ್ಟದಲ್ಲಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಜವಳಿ ವ್ಯಾಪಾರಿಗಳ ಬದುಕು ಇನ್ನೂ ಹೈರಾಣಾಗಲಿದೆ. ಹಾಗಾಗಿ ಜಿಎಸ್‌ಟಿ ಏರಿಕೆಯನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ರು.