ಶಿವಮೊಗ್ಗ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಹಾಕಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಗ್ರಹಿಸಿದ್ದಾರೆ.
ಬಿ.ಸಿ.ನಾಗೇಶ್ ಸಚಿವರಾದ ಬಳಿಕ ಬಹಳ ಪ್ರಾಮಾಣಿಕವಾಗಿ ತಮ್ಮ ಇಲಾಖೆಯ ಕಾರ್ಯವನ್ನು ಮಾಡುತ್ತಿದ್ದಾರೆ. ವರ್ಗಾವಣೆಯನ್ನೇ ದಂದೆಯಾಗಿ ಮಾಡಿಕೊಂಡಿದ್ದ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ಹಾಗೂ ಪಾರದರ್ಶಕತೆಯನ್ನು ತಂದಿದ್ದಾರೆ. ಯಾರಿಗೂ ನೋವಾಗಂತೆ ಎಲ್ಲರನ್ನು ಒಟ್ಟೆಗೆ ತೆಗೆದುಕೊಂಡು ಹೋಗುವ ಸ್ವಭಾವವಿರುವ ಬಿ.ಸಿ.ನಾಗೇಶ್‌ಗಿದೆ. ಇಂಥವರ ಮನೆಗೆ ಮುತ್ತಿಗೆ ಹಾಕಿರುವುದನ್ನು ನಾನು ಖಂಡಿಸುತ್ತೇನೆ ಎಂದರು.