ಆಸ್ತಿಪಾಸ್ತಿ ನಷ್ಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ 

ಶಿವಮೊಗ್ಗ : ಹರ್ಷ ಹತ್ಯೆಯ ಕುರಿತಾಗಿ ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು. ಸೆಕ್ಷನ್ ೧೪೪ ಉಲ್ಲಂಘನೆ ಮಾಡಿದವರು ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾಯಿಂಟ್ ಆಕ್ಷನ್ ಕಮಿಟಿ ಆಗ್ರಹಿಸಿದೆ.

ಭಾನುವಾರ ರಾತ್ರಿ ಪೊಲೀಸ್ ಬಂದೋಬಸ್ತ್ ಇದ್ದರೂ ಕೂಡ ಆಜಾದ್ ನಗರದಲ್ಲಿ ಸುಮಾರು 500 ರಿಂದ 600 ಮಂದಿ ನುಗ್ಗಿ ದಾಂಧಲೆ ಮಾಡಿದ್ದಾರೆ. ಹಾಗೂ ಲಾಲ್ ಬಂದ್ ಕೇರಿಯಲ್ಲಿ ಮನೆಗಳ ಮೇಲೆ ದಾಳಿ ಮಾಡಿ, ವಾಹನಗಳಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಹರ್ಷ ಶವಯಾತ್ರೆ ಸಂದರ್ಭದಲ್ಲಿಯೂ ಕೂಡ ಕಾನೂನು ಬಾಹಿರವಾಗಿ ಜನರನ್ನ ಸೇರಿಸಿ ಅಲ್ಪಸಂಖ್ಯಾತ ರನ್ನ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸ್ ಇಲಾಖೆಯ ವೈಫಲ್ಯದಿಂದಾಗಿ ಇಂತಹ ಕೃತ್ಯಗಳು ನಡೆದಿವೆ.

ಸೆಕ್ಷನ್ ೧೪೪ ಇದ್ದರೂ ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಷ್ಟ ಆದ ಕುಟುಂಬಗಳಿಗೆ ಪರಿಹಾರ ನೀಡಬೇಕು. ಅಮಾಯಕರನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದೆಂದು ಮಾಧ್ಯಮಗೋಷ್ಠಿ ನಡೆಸಿ ಆಗ್ರಹಿಸಲಾಗಿದೆ.