ಬೆಂಗಳೂರು : ನಾಡು ಕಂಡ ಶ್ರೇಷ್ಠ ನಾಯಕ, ಕರ್ನಾಟಕ ಏಕೀಕರಣದ ಹರಿಕಾರ ಕೆಂಗಲ್ ಹನುಮಂತಯ್ಯ ಈ ನಾಡಿಗೆ ಸಲ್ಲಿಸದ ಸೇವೆ ಅಪಾರ. ಈ ಹಿನ್ನೆಲೆಯಲ್ಲಿ ಅವರ ಪ್ರತಿಮೆಯನ್ನ ಅವರ ಹುಟ್ಟೂರಾದ ಕೆಂಗಲ್‌ನಲ್ಲಿ ಶೀಘ್ರದಲ್ಲಿಯೇ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೆಂಗಲ್ ಹನುಮಂತಯ್ಯ ಅವರ ೧೧೪ನೇ ಜನ್ಮದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ, ಕನ್ನಡ ನಾಡಿನ ಏಕೀಕರಣದ ಸಂದರ್ಭದಲ್ಲಿ ಕನ್ನಡಿಗರೆಲ್ಲಾ ಒಂದಾಗಿರಬೇಕೆಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡವರಲ್ಲಿ ಇವರೂ ಒಬ್ಬರು. ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.