ಶಿವಮೊಗ್ಗದಲ್ಲಿ ಮೇಕಪ್ ಕೋರ್ಸ್ ಆರಂಭ

ಶಿವಮೊಗ್ಗ : ಮೇಕಪ್ ಕೋರ್ಸ್ ಮಾಡಲು ಆಸಕ್ತಿಯುಳ್ಳವರಿಗೆ ಶಿವಮೊಗ್ಗದಲ್ಲಿಯೇ ಆ ಅವಕಾಶ ಲಭ್ಯವಾಗಲಿದೆ. ಅಶ್ವಿನಿ ಮೇಕೋವರ್ ಮತ್ತು ಬ್ಯೂಟಿಪಾರ್ಲರ್ ಸಂಸ್ಥೆ ಬೃಹತ್ ಮೇಕಪ್ ತರಬೇತಿ ಕೋರ್ಸ್ ಆರಂಭಿಸಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸ್ಥೆಯ ಮಾಲೀಕರಾದ ಅಶ್ವಿನಿ.ಎಸ್.ಎಂ, ಈ ಕೋರ್ಸ್‌ನಲ್ಲಿ ಪ್ರಾಕ್ಟಿಕಲ್ ಮತ್ತು ಥೀಯರಿ ತರಗತಿಗಳು ಇರಲಿವೆ. ಮೇಕಪ್‌ಗೆ ಬೇಕಾದ ವಸ್ತುಗಳನ್ನು ಸಂಸ್ಥೆಯೆ ನೀಡಲಿದೆ. ತರಬೇತಿ ಮುಗಿದ ನಂತರ ಕೋರ್ಸ್ ಸರ್ಟಿಫಿಕೇಟ್ ನೀಡಲಾಗುವುದು ಹಾಗೂ ಮಾಡೆಲ್ ಒಬ್ಬರಿಗೆ ಮೇಕಪ್ ಮಾಡುವ ಸುವರ್ಣಾವಕಾಶ ಕೂಡ ಇರಲಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಅಶ್ವಿನಿ ಮೇಕೋವರ್ ಮತ್ತು ಬ್ಯೂಟಿಪಾರ್ಲರ್ ಸಂಸ್ಥೆಯ ಉಪಾಧ್ಯಕ್ಷೆ ಶೀಲಾ ಉಪಸ್ಥಿತರಿದ್ದರು.